Mysore
18
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ವಿಜಯ್‌ ಹಜಾರೆ ಟ್ರೋಫಿ 2023: ಪಡಿಕ್ಕಲ್‌ ಶತಕ, ಕೌಶಿಕ್‌ ಮ್ಯಾಜಿಕ್; ಉತ್ತರಾಖಂಡ ವಿರುದ್ಧ ಕರ್ನಾಟಕಕ್ಕೆ ಗೆಲುವು‌

ಪ್ರಸ್ತುತ ನಡೆಯುತ್ತಿರುವ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ತನ್ನ ಎರಡನೇ ಗೆಲುವನ್ನು ದಾಖಲಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉತ್ತರಾಖಂಡದ ವಿರುದ್ಧ ಸೆಣಸಾಡಿದ ಕರ್ನಾಟಕ 52 ರನ್‌ಗಳ ಗೆಲುವನ್ನು ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಜಮ್ಮು ಕಾಶ್ಮೀರವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಕರ್ನಾಟಕ ಈ ಗೆಲುವಿನೊಂದಿಗೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 284 ರನ್‌ ಗಳಿಸಿ ಎದುರಾಳಿ ಉತ್ತರಾಖಂಡ ತಂಡಕ್ಕೆ ಗೆಲ್ಲಲು 285 ರನ್‌ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿರುವ ಉತ್ತರಾಖಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 232 ರನ್‌ ಗಳಿಸಿತು.

ಕರ್ನಾಟಕ ಇನ್ನಿಂಗ್ಸ್:‌ ಕರ್ನಾಟಕದ ಪರ ಆರಂಭಿಕರಾಗಿ ಕಣಕ್ಕಿಳಿದ ಆರ್‌ ಸಮರ್ಥ್‌ 11 ರನ್‌ ಕಲೆ ಹಾಕಿದರೆ, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಮಯಾಂಕ್‌ ಅಗರ್ವಾಲ್‌ ಶೂನ್ಯ ಸುತ್ತಿದರು. ಹೀಗೆ ಆರಂಭದಲ್ಲಿಯೇ ಆಘಾತ ಅನುಭವಿಸಿದ ಕರ್ನಾಟಕ ತಂಡಕ್ಕೆ ಮೂರನೇ ವಿಕೆಟ್‌ಗೆ ಜತೆಯಾದ ದೇವದತ್‌ ಪಡಿಕ್ಕಲ್‌ ಹಾಗೂ ನಿಕಿನ್ ಜೋಸ್‌ ಆಸರೆಯಾದರು. ದೇವದತ್‌ ಪಡಿಕ್ಕಲ್‌ 122 ಎಸೆತಗಳಲ್ಲಿ 117 ರನ್‌ ಬಾರಿಸಿದರೆ, ನಿಕಿನ್‌ ಜೋಸ್‌ 82 ಎಸೆತಗಳಲ್ಲಿ 72 ರನ್‌ ಬಾರಿಸಿದರು. ಇನ್ನುಳಿದಂತೆ ಮನೀಶ್‌ ಪಾಂಡೆ 40 ಎಸೆತಗಳಲ್ಲಿ 56 ರನ್‌, ಕೃಷ್ಣಪ್ಪ ಗೌತಮ್‌ 4, ಶರತ್‌ ಬಿಆರ್‌ 6 ಹಾಗೂ ಜಗದೀಶ ಸುಚಿತ್‌ ಅಜೇಯ 7 ರನ್‌ ಬಾರಿಸಿದರು.

ಉತ್ತರಾಖಂಡದ ಪರ ಅಗ್ರಿಮ್‌ ತಿವಾರಿ 3 ವಿಕೆಟ್‌ ಪಡೆದರೆ, ರಜನ್‌ ಕುಮಾರ್‌ 2 ವಿಕೆಟ್‌ ಹಾಗೂ ದೀಪಕ್‌ ಧಪೋಲಾ 1 ವಿಕೆಟ್‌ ಪಡೆದರು.

ಉತ್ತರಾಖಂಡ ಇನ್ನಿಂಗ್ಸ್:‌ ತಂಡದ ಪರ ಯುವರಾಜ್‌ ಚೌಧರಿ 13, ಅವ್ನೀಸ್‌ ಸುಧಾ ಶೂನ್ಯ, ನಾಯಕ ಜೀವನ್‌ಜೋತ್‌ ಸಿಂಗ್‌ 46, ದಿಕ್ಷಾಂಶು ನೇಗಿ 21, ಸ್ವಪ್ನಿಲ್‌ ಸಿಂಗ್‌ 13, ಆದಿತ್ಯ ತಾರೆ 17, ಕುನಾಲ್‌ ಚಾಂಡೆಲಾ 98, ಹಿಮಾನ್ಷು ಬಿಷ್ತ್‌ 1, ಅಗ್ರಿಮ್‌ ತಿವಾರಿ ಶೂನ್ಯ, ರಾಜನ್‌ ಕುಮಾರ್‌ ಅಜೇಯ 1 ಹಾಗೂ ದೀಪಕ್‌ ಧಪೊಲಾ ಅಜೇಯ 1 ರನ್‌ ಕಲೆ ಹಾಕಿದರು.

ಕರ್ನಾಟಕದ ಪರ 10 ಓವರ್‌ ಮಾಡಿ ಕೇವಲ 30 ರನ್‌ ನೀಡಿ 2 ಮೇಡನ್‌ ಓವರ್‌ ಜತೆಗೆ 4 ವಿಕೆಟ್‌ ಪಡೆದ ವಾಸುಕಿ ಕೌಶಿಕ್‌ ಉತ್ತರಾಖಂಡ ತಂಡದ ಪ್ರಮುಖ ಆಟಗಾರರ ವಿಕೆಟ್‌ ಪಡೆದರು. ಇನ್ನುಳಿದಂತೆ ವಿದ್ವತ್‌ ಕಾವೇರಪ್ಪ 2 ವಿಕೆಟ್‌, ವಿಜಯ್‌ ಕುಮಾರ್‌ ವೈಶಾಖ್‌, ಕೃಷ್ಣಪ್ಪ ಗೌತಮ್‌ ಹಾಗೂ ಜಗದೀಶ ಸುಚಿತ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ