Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನ.19ರಂದು ಏರ್‌ಇಂಡಿಯಾದಲ್ಲಿ ಪ್ರಯಾಣಿಸುವವರ ಜೀವಕ್ಕೆ ಅಪಾಯವಿದೆ: ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಬೆದರಿಕೆ

ನವದೆಹಲಿ : ಖಲಿಸ್ತಾನಿ ಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನುನ್‌ನ ಹೊಸ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತ್ಯಕ್ಷವಾಗಿದೆ, ವೀಡಿಯೊದಲ್ಲಿ ನ.19ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಲು ಯೋಜಿಸಿರುವವರಿಗೆ ಬೆದರಿಕೆಯನ್ನು ಒಡ್ಡಿರುವ ಆತ, ‘ನಿಮ್ಮ ಜೀವಗಳಿಗೆ ಅಪಾಯವಾಗಲಿದೆ ’ ಎಂದು ಹೇಳಿದ್ದಾನೆ.

‘ನ.19ರಂದು ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ ಎಂದು ನಾವು ಸಿಖ್ ಜನರಿಗೆ ಸೂಚಿಸುತ್ತಿದ್ದೇವೆ. ಅಂದು ಜಾಗತಿಕ ದಿಗ್ಬಂಧನವಿರಲಿದೆ. ಏರ್‌ಇಂಡಿಯಾದಲ್ಲಿ ಪ್ರಯಾಣಿಸಬೇಡಿ, ಇಲ್ಲದಿದ್ದರೆ ನಿಮ್ಮ ಜೀವ ಅಪಾಯಕ್ಕೆ ಸಿಲುಕಲಿದೆ’ ಎಂದು ಆತ ವೀಡಿಯೊದಲ್ಲಿ ಹೇಳಿದ್ದಾನೆ.

ನ.19ರಂದು ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಮುಚ್ಚಿರಲಿದೆ ಮತ್ತು ಅದರ ಹೆಸರನ್ನು ಬದಲಿಸಲಾಗುವುದು ಎಂದೂ ಪನ್ನುನ್ ಹೇಳಿಕೊಂಡಿದ್ದಾರೆ.

ನ.19 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಅಂತಿಮ ಪಂದ್ಯ ನಡೆಯಲಿರುವ ದಿನವೂ ಆಗಿದೆ ಎಂದು ಆತ ಬೆಟ್ಟು ಮಾಡಿದ್ದಾನೆ.

ಪಂಜಾಬ್ ಮತ್ತು ಇತರ ಕಡೆಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ಪನ್ನುನ್ ವಿರುದ್ಧ ವಿಶೇಷ ಎನ್‌ಐಎ ನ್ಯಾಯಾಲಯವು 2021, ಫೆ.3ರಂದು ಜಾಮೀನುರಹಿತ ವಾರಂಟ್ ಹೊರಡಿಸಿದ್ದು,ಕಳೆದ ವರ್ಷದ ನವಂಬರ್‌ನಲ್ಲಿ ನ್ಯಾಯಾಲಯವು ಆತನನ್ನು ‘ಘೋಷಿತ ಅಪರಾಧಿ’ ಎಂದು ಪ್ರಕಟಿಸಿತ್ತು.

https://x.com/OnTheNewsBeat/status/1720711657075486858?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ