Mysore
24
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಟೆಂಪೋ ಉರುಳಿ ಬಿದ್ದು ಮಹಿಳೆ ಸಾವು

ಹಲಗೂರು : ಅಂತರವಳ್ಳಿ ಬೆಟ್ಟದ ಬಳಿ ಕೂಲಿಕಾರರನ್ನು ಕರದೊಯ್ಯುತ್ತಿದ್ದ ಟೆಂಪೊವೊಂದು ರಸ್ತೆ ಬದಿಗೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಕಸಬ ಹೋಬಳಿಯ ಪುಟ್ಟೇಗೌಡನ ದೊಡ್ಡಿ ಗ್ರಾಮದ ನಿವಾಸಿಯಾದ ಪದ್ಮ (40)ಮೃತಪಟ್ಟ ಮಹಿಳೆ.

ಶನಿವಾರ ಬೆಳಿಗ್ಗೆ ಅಂತರವಳ್ಳಿ ಬೆಟ್ಟದ ಸಮೀಪ ಪುಟ್ಟೇಗೌಡನದೊಡ್ಡಿ ಗ್ರಾಮದ ಮಹಿಳಾ ಕಾರ್ಮಿಕರು ಹಲ್ಲೇಗಾಲ ಗ್ರಾಮಕ್ಕೆ ನರೇಗಾ ಯೋಜನೆ ಕಾಮಗಾರಿಯಡಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದು ಈ ಘಟನೆ ಸಂಭವಿಸಿದೆ.

ಈ ಅಪಘಾತದಲ್ಲಿ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು. ಗಾಯಾಳುಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಡಿವೈಎಸ್‌ಪಿ ಕೃಷ್ಣಯ್ಯ, ಸಿಪಿಐ ಶ್ರೀಧರ್ ಮತ್ತು ಪಿಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!