Mysore
26
light rain

Social Media

ಶನಿವಾರ, 13 ಜೂನ್ 2026
Light
Dark

ಕಬ್ಬಿನ ಲಾರಿಗೆ ತಗುಲಿದ ವಿದ್ಯುತ್ : ಇಬ್ಬರ ಸಾವು

ಮಳವಳ್ಳಿ : ಕಬ್ಬಿನ ಲಾರಿಗೆ ಜೋತುಬಿದ್ದ ವಿದ್ಯುತ್ ಲೇನ್ ತಗುಲಿ ಚಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಹನೂರು ತಾಲ್ಲೂಕಿನ ಮೂಡಹಳ್ಳಿ ಗ್ರಾಮದ ಗುಂಡಾಲ್ ಜಲಾಶಯಕ್ಕೆ ಹೋಗುವ ರಸ್ತೆಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಘಟನೆಯಲ್ಲಿ ಮಳವಳ್ಳಿ ತಾಲ್ಲೂಕಿನ ಹಂಗ್ರಾಪುರ ಗ್ರಾಮದ ಚಾಲಕ ಮಹದೇವಸ್ವಾಮಿ @ ಚಿನ್ನಸ್ವಾಮಿ (35), ಪ್ರಕಾಶ್(45) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಶನಿವಾರ ಮುಂಜಾನೆ ಹನೂರು ತಾಲ್ಲೂಕಿನ ಮೂಡಹಳ್ಳಿ ಗ್ರಾಮದಿಂದ ಗುಂಡಾಲ್ ಜಲಾಶಯದ ಸಮೀಪದ ರಸ್ತೆಯಲ್ಲಿ ಕಬ್ಬು ತುಂಬಿಕೊಂಡು ಬರುವಾಗ  ಜೋತುಬಿದ್ದ ವಿದ್ಯುತ್ ತಂತಿ ತಗುಲಿದ ಕಾರಣ ಈ ಘಟನೆ ನಡೆದಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಕೊಳ್ಳೆಗಾಲ ಗ್ರಾಮಾಂತರ ಪೋಲಿಸರು ಹಾಗೂ ಸೆಸ್ಕಾಂ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೋತುಬಿದ್ದ ವಿದ್ಯುತ್ ಲೇನ್‌ನಿಂದ ಈ ದುರ್ಘಟನೆ ನಡೆದಿದೆ ಎಂದು ಸಾರ್ವಜನಿಕರು ಸೆಸ್ಕ್ ಅಧಿಕಾರಿಗಳ ನಿರ್ಲಕ್ಷತೆಯ ಬಗ್ಗೆ  ಕಿಡಿಕಾರಿದ್ದಾರೆ.
ಕುಟುಂಬಸ್ಥರ ಅಕ್ರಂಧನ : ಕುಟುಂಬಕ್ಕೆ ಅಧಾರ ಸ್ಥಂಭವಾಗಿದ್ದ ಈ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಹೇಳತೀರದಾಗಿದೆ. ಸ್ಥಳಕ್ಕೆ ಹಂಗ್ರಾಪುರ ಗ್ರಾಮದ ಮುಖಂಡರು ತೆರಳಿ ಶವಗಳನ್ನು ಸ್ವಗ್ರಾಮಕ್ಕೆ ತರಲು ಕ್ರಮವಹಿಸಿದ್ದಾರೆ. ಈ ಘಟನೆಯಿಂದ ಹಂಗ್ರಾಪುರ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!