Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಶ್ವಥ್ ನಾರಾಯಣ ಅಲ್ಲ ನವರಂಗಿ ನಾರಾಯಣ : ಡಿ.ಕೆ ಶಿವಕುಮಾರ್

ಬೆಂಗಳೂರು : ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೆಂಡಾಮಂಡಲರಾಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆಶಿ ಬೆಂಗಳೂರು ಅಭಿವೃದ್ಧಿ ಸಚಿವ ಅಲ್ಲ, ಬೆಂಗಳೂರು ನಿರ್ನಾಮ ಸಚಿವ ಎಂದು ಆರೋಪ ಮಾಡಿರುವ ಅಶ್ವಥ್ ನಾರಾಯಣ್ ವಿರುದ್ಧ ಕಿಡಿಕಾರಿದರು. ಅವನು ಅಶ್ವಥ್ ನಾರಾಯಣ್ ಅಲ್ಲ ಅವರು, ನವರಂಗಿ ನಾರಾಯಣ. ರಾಮನಗರಕ್ಕೆ ಬಂದು ಕ್ಲೀನ್ ಮಾಡ್ತೀನಿ ಎಂದೇಳಿ ಅವರ ಪಾರ್ಟಿ ಕ್ಲೀನ್ ಮಾಡಿ ಹೋದರು. ಅವರ ಇಲಾಖೆಯಲ್ಲಿ, ಬೆಂಗಳೂರು ನಗರದಲ್ಲಿ ಏನು ಮಾಡಿದ್ದಾರೆ ಎಂದು ನಾವು ಇನ್ನೂ ಬಿಚ್ಚಿಲ್ಲ. ಏನೇನು ಆಟ ಆಡ್ತಿದ್ದಾರೆ, ಯಾರನ್ನು ಎತ್ತಿ ಕಟ್ಟುತ್ತಿದ್ದಾರೆ ಎಲ್ಲ ಗೊತ್ತಿದೆ, ಎಲ್ಲಿಗೆ ಬೇಕಾದರೂ ಹೋಗಲಿ. ಸ್ವಾತಂತ್ರ್ಯ ದಿನಾಚರಣೆ ಆಗಲಿ ನಂತರ ಮಾತನಾಡುತ್ತೇನೆ ಎಂದರು.

ಕಳ್ಳರನ್ನು ರಕ್ಷಣೆ ಮಾಡುವುದರಲ್ಲಿ ಅಶ್ವಥ್ ನಾರಾಯಣ್ ಅವರಿಗೆ ಡಾಕ್ಟರೇಟ್ ಕೊಡಬೇಕು. ಆ ಮೆಂಟಲ್ ಟೆನ್ಷನ್‍ನಲ್ಲಿ ಇದ್ದಾರೆ. ಬೆಂಗಳೂರು ನಗರದಲ್ಲಿ, ಅವರ ಇಲಾಖೆಯಲ್ಲಿ ಏನು ಮಾಡಿದ್ರು ಅಂತ ಇನ್ನೂ ತೆಗೆದಿಲ್ಲ. ಟೈಮ್ ಬರುತ್ತೆ ಆಗ ಎಲ್ಲವೂ ಗೊತ್ತಾಗಲಿದೆ. ಕಂಪ್ಲೀಟ್ ಏನು ಮಾಡಿದ್ದರು, ಹೇಗೆ ಎತ್ತಿ ಕಟ್ಟಿದ್ದರು ಗೊತ್ತಾಗುತ್ತಿದೆ. ಕೆಲಸ ಯಾರು ಮಾಡಿದ್ದಾರೆ, ಯಾರು ನಿಜವಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ತನಿಖೆ ಮಾಡುವ ಕೆಲಸ ಮಾಡುತ್ತಿದೆ. ಇದಕ್ಕೆ ಏನೆಲ್ಲಾ ಆಟ ಆಡುತ್ತಿದ್ದಾರೆ ಆಡಲಿ. ಮೊನ್ನೆಯೇ ಈ ಬಗ್ಗೆ ಮಾತನಾಡಬೇಕಿತ್ತು. ಆದರೆ ಬಿಬಿಎಂಪಿಯಲ್ಲಿ ಒಂದು ಆಕ್ಸಿಡೆಂಟ್ ಆಯ್ತು. ಇಂದೂ ಬೇಡ ಪಾರ್ಟಿ ಕೆಲಸ ಇದೆ. ಇಂಡಿಪೆಂಡೆನ್ಸ್ ಡೇ ಮುಗೀಲಿ ಮಾತನಾಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಪ್ರಾಮಾಣಿಕರಾಗಿದ್ದರೆ ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂದಿದ್ದ ಸಿಟಿ ರವಿ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ಸಿ.ಟಿ.ರವಿಗೂ ಟ್ರೀಟ್ ಮೆಂಟ್ ಬೇಕಾಗಿದೆ. ಟ್ರೀಟ್‍ಮೆಂಟ್ ಕೊಡೋಣ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ