Mysore
25
overcast clouds

Social Media

ಬುಧವಾರ, 01 ಜುಲೈ 2026
Light
Dark

32 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ ಬಿಗ್‌ ಬಿ – ತಲೈವಾ

ಮುಂಬೈ: ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ಅಮಿತಾಬ್‌ ಬಚ್ಚನ್‌ ಮತ್ತು ರಜನೀಕಾಂತ್‌ ಬರೋಬ್ಬರಿ 32 ವರ್ಷಗಳ ಬಳಿಕ ಸಿನೆಮಾವೊಂದಕ್ಕೆ ಜೊತೆಯಾಗಲಿದ್ದಾರೆ. ಒಂದು ಕಾಲದಲ್ಲಿ ʻಹಮ್‌ʼ, ʻಅಂಧಾ ಕಾನೂನ್‌ʼ, ʻಗೆರಾಫ್ತಾರ್‌ʼ ಮೊದಲಾದ ಹಿಟ್‌ ಸಿನೆಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ  ಮತ್ತೊಮ್ಮೆ ಒಂದಾಗಲಿದ್ದಾರೆ.

ಬಹುನಿರೀಕ್ಷಿತ ʻಜೈಲರ್‌ʼ ಸಿನೆಮಾ ಸೆಟ್ಟೇರಲು ರೆಡಿಯಾಗಿದ್ದು, ಈ ಹೊತ್ತಲ್ಲೇ ಸಿನಿಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ʻತಲೈವಾರ್‌ 170ʼ ಎಂಬ ಸಿನೆಮಾದಲ್ಲಿ ರಜನಿ-ಅಮಿತಾಬ್‌ ಜೋಡಿ ಜೊತೆಯಾಗಿ ನಟಿಸಲಿದ್ದು, ಈ ಸಿನೆಮಾವನ್ನು ʻಜೈ ಭೀಮ್‌ʼ ಖ್ಯಾತಿಯ ಟಿ.ಜೆ ಜ್ಞಾನವೇಲ್‌ ಅವರು ನಿರ್ದೇಶಿಸಲಿದ್ದಾರೆ.

ಇದು ರಜನಿಕಾಂತ್‌ ಅಭಿನಯದ 170ನೇ ಸಿನಿಮಾ ಆಗಿರುವ ಕಾರಣ ಇದಕ್ಕೆ ʻತಲೈವಾರ್‌ 170ʼ ಎಂದು ಹೆಸರಿಡಲಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!