Mysore
26
overcast clouds

Social Media

ಭಾನುವಾರ, 14 ಜೂನ್ 2026
Light
Dark

ಬೆಂಗಳೂರು: ಇಡಿಯಿಂದ ಚೀನಾದ ಶಿಕ್ಷಣ ಕಂಪನಿಯ 8.26 ಕೋಟಿ ರೂ.ಜಪ್ತಿ

ಬೆಂಗಳೂರು: ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ, ಸಂಪೂರ್ಣ ಮಾಲಕತ್ವ ಮತ್ತು ಚೀನಾ ಪ್ರಜೆಗಳ ನಿಯಂತ್ರಣದಲ್ಲಿರುವ ಬೆಂಗಳೂರು ಮೂಲದ ಆನ್‌ಲೈನ್ ಶಿಕ್ಷಣ ಕಂಪನಿಯ 8.26 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.

ಪಿಜನ್ ಎಜುಕೇಶನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ನ ಹಣವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 37 ಎ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ಕಂಪನಿಯು “ಒಡಾಕ್ಲಾಸ್” ಬ್ರಾಂಡ್ ಹೆಸರಿನಲ್ಲಿ ಆನ್‌ಲೈನ್ ಶಿಕ್ಷಣವನ್ನು ಒದಗಿಸಿದೆ. ಜಾರಿ ನಿರ್ದೇಶನಾಲಯ ಎಪ್ರಿಲ್‌ನಲ್ಲಿ ಹುಡುಕಾಟಗಳನ್ನು ನಡೆಸಿ ಕಂಪನಿಯು 100 ಪ್ರತಿಶತ ಚೀನೀ ಪ್ರಜೆಗಳ ಒಡೆತನದಲ್ಲಿದೆ ಮತ್ತು ಚೀನಾದಲ್ಲಿ ಕುಳಿತಿರುವ ವ್ಯಕ್ತಿಗಳು ಕಂಪನಿಯ ಎಲ್ಲಾ ವ್ಯವಹಾರಗಳು, ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕಂಡುಕೊಂಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!