Mysore
31
overcast clouds

Social Media

ಮಂಗಳವಾರ, 16 ಜೂನ್ 2026
Light
Dark

‘ನಮ್ಮ ಭಾವನೆಗಳನ್ನು ನೋಯಿಸಬೇಡಿ..’: ಧೋನಿಗೆ ಮನವಿ ಮಾಡಿದ ಹರ್ಭಜನ್

ಚೆನ್ನೈ: ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಎಂಎಸ್ ಧೋನಿ ಐಪಿಎಲ್ 2023 ರ ನಂತರವೂ ಆಡುವುದನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ಐಪಿಎಲ್ 2023 ರ ಅಂತ್ಯದ ನಂತರ ಧೋನಿ ಅವರ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಾರೆ ಎಂಬ ವಿಚಾರವು ದೊಡ್ಡ ಚರ್ಚೆಯ ವಿಷಯವಾಗಿದೆ.ಚೆನ್ನೈ: ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಎಂಎಸ್ ಧೋನಿ ಐಪಿಎಲ್ 2023 ರ ನಂತರವೂ ಆಡುವುದನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಧೋನಿಯೂ ಹಲವು ಬಾರಿ ಸುಳಿವು ನೀಡಿದ್ದಾರೆ. ಆದರೆ ಎಲ್ ಎಸ್ ಜಿ ವಿರುದ್ಧದ ಟಾಸ್ ಸಮಯದಲ್ಲಿ ಕಾಮೆಂಟೇಟರ್ ಡ್ಯಾನಿ ಮಾರಿಸನ್ ಅವರು ನಿವೃತ್ತಿಯ ಬಗ್ಗೆ ಕೇಳಿದಾಗ, ಧೋನಿ ಐಪಿಎಲ್ 2023 ಅವರ ಕೊನೆಯ ಋತುವಿನ ಬಗ್ಗೆ ಎಂದಿಗೂ ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ಧೋನಿ ಇನ್ನೂ ಕೆಲವು ದೊಡ್ಡ ಶಾಟ್‌ಗಳು ಮತ್ತು ತ್ವರಿತ ಸಿಂಗಲ್‌ಗಳನ್ನು ಹೊಡೆಯುವ ಮೂಲಕ ತಮ್ಮ ಹಳೆಯ ವರ್ಶನ್ ನಂತೆ ಕಾಣುತ್ತಿದ್ದಾರೆ ಎಂದು ಹೇಳಿದರು.

“ಅವರು ತನ್ನ ಪೂರ್ಣ ವೇಗದಲ್ಲಿ ಓಡದಿದ್ದರೂ, ಸಿಕ್ಸರ್‌ಗಳನ್ನು ಸರಾಗವಾಗಿ ಹೊಡೆಯುತ್ತಿದ್ದಾರೆ. ಬ್ಯಾಟ್‌ ನೊಂದಿಗೆ ಇನ್ನೂ ಅಪಾಯಕಾರಿಯಾಗಿ ಕಾಣಿಸುತ್ತಿದ್ದಾರೆ. ಎಂಎಸ್ ಡಿ, ನಮ್ಮ ಭಾವನೆಗಳನ್ನು ನೋಯಿಸಬೇಡಿ. ನೀವು ಆಟ ಮುಂದುವರಿಸಬೇಕು” ಎಂದು ಹರ್ಭಜನ್ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!