Mysore
27
broken clouds

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ಬೆಂಗಳೂರಿನಲ್ಲಿ ಕೈ ನಾಯಕನ ರೌಂಡ್ಸ್ : ಬಿಎಂಟಿಸಿಯಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ

ಬೆಂಗಳೂರು : ಪ್ರಚಾರದ ಕಣದಲ್ಲಿ ಕ್ಲೈಮ್ಯಾಕ್ಸ್ ಕ್ಯಾಂಪೇನ್ ಮಾಡುತ್ತಿರುವ ರಾಹುಲ್ ಗಾಂಧಿ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿದ್ದಾರೆ. ಕನ್ನಿಂಗ್​​ಹ್ಯಾಮ್ ರಸ್ತೆಯ ಕೆಫೆಯಲ್ಲಿ ಗ್ರಾಹಕರ ಜೊತೆ ಕಾಫಿ ಸವಿದು ಕಷ್ಟ-ಸುಖಗಳನ್ನು ಆಲಿಸಿದ್ದಾರೆ. ಬಳಿಕ ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರ ಕುಂದು ಕೊರತೆಗಳಿಗೆ ಕಿವಿಯಾದ್ರು. BMTC ಬಸ್​ನಲ್ಲಿ ಪ್ರಯಾಣಿಕರ ಜೊತೆ ಚರ್ಚೆ ನಡೆಸಿದರು.

ಇನ್ನು ನಿನ್ನೆ ಪುಲಕೇಶಿನಗರ ಕ್ಷೇತ್ರದಲ್ಲಿ ರೋಡ್ ಶೋ ಮಾಡಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ ಪರ ಮತ ಬೇಡಿದರು. ಇದೇ ವೇಳೆ ಬಿಜೆಪಿ ದ್ವೇಷ ಹರಡುತ್ತೆ. ನಾವು ಪ್ರೀತಿಯಿಂದ ಜನರನ್ನು ಬೆಸೆಯುತ್ತೇವೆ. ದ್ವೇಷದ ಬಜಾರ್‌ನಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇವೆ ಎಂದರು. ಬಿಜೆಪಿ ವಿರುದ್ಧ ಬೆಲೆ ಏರಿಕೆ, 40 ಪರ್ಸೆಂಟ್ ಅಸ್ತ್ರ ಝಳಪಿಸಿದರು. ಡೆಲಿವರಿ ಬಾಯ್ ಸ್ಕೂಟರ್‌ ಏರಿದ ರಾಹುಲ್, ಸಿಟಿ ಮಂದಿಯ ಗಮನ ಸೆಳೆದರು. ಏರ್‌ಲೈನ್ಸ್ ಹೊಟೇಲ್‌ನಿಂದ ಶಾಂಗ್ರಿಲಾ ಹೋಟೆಲ್ ವರೆಗೆ ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಾ ಸಂವಾದ ನಡೆಸಿದರು. ಇಲ್ಲಿಂದ ನೇರವಾಗಿ ಆನೇಕಲ್​ಗೆ ಎಂಟ್ರಿಕೊಟ್ಟ ರಾಹುಲ್, ರೋಡ್ ಶೋ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಹುಲ್​ಗೆ ಸಾಥ್ ಕೊಟ್ಟರು. ರಾತ್ರಿ ಶಿವಾಜಿನಗರದಲ್ಲಿ ಕ್ಯಾಂಪೇನ್ ಮಾಡಿದ ಕೈ ನಾಯಕ ಬಿಜೆಪಿ ವಿರುದ್ಧ ಗುಡುಗಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!