Mysore
32
overcast clouds

Social Media

ಮಂಗಳವಾರ, 16 ಜೂನ್ 2026
Light
Dark

ಅನಾರೋಗ್ಯ: ಮಹಿಳಾ ಪೇದೆ ಸಾವು

ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಜರಬಾದ್ ಪೊಲೀಸ್ ಠಾಣೆಯ ಮಹಿಳಾ ಪೇದೆ ಗೀತಾ ಎಂಬುವವರು ನೇಣಿಗೆ ಶರಣಾಗಿದ್ದಾರೆ.
ನಗರದ ಕೆಎಸ್‌ಆರ್‌ಪಿ ಕ್ವಾರ್ಟರ್ಸ್‌ನಲ್ಲಿ ಘಟನೆ ನಡೆದಿದೆ. ಗೀತಾ ಅವರು ನಜರಬಾದ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದು,12 ಗಂಟೆ ಸುಮಾರಿಗೆ ಅನಾರೋಗ್ಯದ ಕಾರಣ ಹೇಳಿ ಮನೆಗೆ ತೆರಳಿದ್ದಾರೆ.
ತಮ್ಮ ಪತಿಯನ್ನು ಸಮೀಪದ ಎಟಿಎಂನಲ್ಲಿ ಹಣ ತರುವಂತೆ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೀತಾ ಅವರ ಪೋನ್‌ಗೆ ಒಟಿಪಿ ಬಂದಿದ್ದು, ಅವರ ಪತಿ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ನಂತರ ಮನೆಗೆ ಬಂದು ನೋಡಿದಾಗ ಪತ್ನಿ ಗೀತಾ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!