Mysore
26
light rain

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಚಿಂತನ ಗಣಿತ ಪರೀಕ್ಷೆಯಲ್ಲಿ ಯಶಸ್ವಿನಿ ರಾಜ್ಯಕ್ಕೆ ಪ್ರಥಮ

ಮೈಸೂರು : ಚಿತ್ರದುರ್ಗದ ಚಿಂತನ ಪ್ರಕಾಶನ ಆಯೋಜಿಸಿದ್ದ 2022-23ನೇ ಸಾಲಿನ ಅಂತಾರಾಷ್ಟ್ರೀಯ ಮಟ್ಟದ ಚಿಂತನ ಗಣಿತ ಪರೀಕ್ಷೆಯಲ್ಲಿ ಮೈಸೂರಿನ ಗುರೂರಿನ ಗುಡ್ ಶೆರ್ಡ್ ಆಂಗ್ಲ ಮಾಧ್ಯಮ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ ಆರ್. ರಾಜ್ಯಮಟ್ಟದಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾಳೆ. ಜಿಲ್ಲಾ ಮಟ್ಟದಲ್ಲಿ ವೇದಶ್ರೀ, ವೈ.ಸಂಜನಾ, ಎಂ.ಶೃತಿ ಪ್ರಥಮ ಸ್ಥಾನ ಪಡೆದಿದ್ದಾರೆ. ತಾಲೂಕು ಮಟ್ಟದಲ್ಲಿ ವೈ.ಕೃಷ್ಣ, ಮುದಾಸಿರ್ ಅಹಮ್ಮದ್ ಮೊದಲ ಸ್ಥಾನ ಪಡೆದಿದ್ದಾರೆ. ಶಾಲಾ ಹಂತದಲ್ಲಿ 18 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 5 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ವಿಜಯ ಕರ್ನಾಟಕ ಪತ್ರಿಕೆ ಮೈಸೂರಿನ ಗ್ರಾಫಿಕ್ ಡಿಸೈನರ್ ಜಿ.ಎ.ರಮೇಶ್ ಪುತ್ರಿ.
————————-
ಅಂತಾರಾಷ್ಟ್ರೀಯ ಮಟ್ಟದ ಚಿಂತನ ಗಣಿತ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಯಶಸ್ವಿನಿ ಆರ್.
ಚಿಂತನ ಪ್ರಕಾಶನ ಆಯೋಜಿಸಿದ್ದ ಗಣಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಮೈಸೂರು ನಗರದ ಗುರೂರಿನ ಗುಡ್ ಶೆರ್ಡ್ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದ ಪ್ರಾಂಶುಪಾಲರಾದ ವಿನು ರೆಜಿ ಪರೇಲ್‌ಘಿ, ಶಿಕ್ಷಕ ಪ್ರವೀಣ್‌ಕುಮಾರ್.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!