Mysore
25
overcast clouds

Social Media

ಸೋಮವಾರ, 28 ಸೆಪ್ಟೆಂಬರ್ 2026
Light
Dark

ಕಳ್ಳತನ : ಮಾಲು ಸಮೇತ ಆರೋಪಿಗಳ ಬಂಧನ

ಕೊಳ್ಳೆಗಾಲ : ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯ ಬೀಗ ಮುರಿದು ನಗದು ಹಾಗೂ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಳ್ಳೆಗಾಲ ಗ್ರಾಮಾತರ ಪೊಲೀಸರ್‌ ಠಾಣೆಯಲ್ಲಿ ನಡೆದಿದೆ.

ತಾಲ್ಲೂಕಿನ ಹೊಂಡರಬಾಳು ಗ್ರಾಮದ ನಿವಾಸಿ ಜಡೆಸ್ವಾಮಿ  ಅವರು ತಮ್ಮ ಕುಟುಂಬ ಸಮೇತರಾಗಿ ಓಂಶಕ್ತಿ ದೇವಾಲಯಕ್ಕೆ  ತೆರಳಿದ್ದರು ಈ ವೇಳೆ ಇದೇ ಸಮಯವನ್ನು ಹೊಂಚು ಹಾಕಿದ್ದ ಆರೋಪಿಗಳಾದ ಹೊಂಡರಬಾಳುವಿನ ನಿವಾಸಿ ರಂಗರಾಜು (41) ಹಾಗೂ ಮಧುವನಹಳ್ಳಿ ಗ್ರಾಮದ ಮಹೇಶ್ (46) ಇವರುಗಳು 190ಗ್ರಾಂ ಚಿನ್ನ ಹಾಗೂ 90 ಸಾವಿರ ರೂ ನಗದನ್ನು ದೋಚಿದ್ದರು.
ಈ ಸಂಬಂಧ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದು.ಮುಂದಿನ ತನಿಖೆ ನಡೆಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!