Mysore
27
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮಂಡ್ಯ: ಮೆಗಾ ಹಾಲಿನ ಡೈರಿ ಉದ್ಘಾಟಿಸಿದ ಅಮಿತ್​ ಶಾ

2,250 ಕೋಟಿ ವೆಚ್ಚದ ಮೆಗಾ ಹಾಲಿನ ಡೈರಿ ಉದ್ಘಾಟನೆ – ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಉಪಸ್ಥಿತಿ.

ಮಂಡ್ಯ: ಇಲ್ಲಿನ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ 2,250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಗಾ ಡೈರಿಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ದೀಪ ಬೆಳಗುವ ಮೂಲಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತಿ ವಹಿಸಿದ್ದರು.
ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಜಿಲ್ಲೆಯ ಡೈರಿಗೆ ಈಗಾಗಲೇ ಹಲವಾರು ಪ್ರಶಂಸೆಗಳು ದೊರೆತಿವೆ. ಈಗ ಮೆಗಾ ಡೈರಿ ಲೋಕಾರ್ಪಣೆಗೊಂಡಿದೆ. ಈ ಡೈರಿ 1 ಲಕ್ಷ ಲೀ. ಹಾಲಿನ ಸಂಗ್ರಹಣೆ ಸಾಮರ್ಥ್ಯ ಹೊಂದಿರುವುದು ಇಲ್ಲಿನ ರೈತರಿಗೆ ಇನ್ನೂ ಅನುಕೂಲವಾಗಲಿದೆ. ಅನಾರೋಗ್ಯದ ನಡುವೆಯೂ ಮಾಜಿ ಪ್ರಧಾನಿ ದೇವೇಗೌಡರು ಮೆಗಾ ಡೈರಿ ಉದ್ಘಾಟನೆಗೆ ಬಂದಿದ್ದಾರೆ. ಬೊಮ್ಮಾಯಿ ಅವರು ಹೆಚ್ಚಿನ ಆಸಕ್ತಿವಹಿಸಿ ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.ದೇವೇಗೌಡರ ಕಾಲಿಗೆ ನಮಸ್ಕರಿಸಿದ ಬೊಮ್ಮಾಯಿ : ಮೆಗಾ ಡೈರಿ ಉದ್ಘಾಟನೆ ಸಮಾರಂಭ ಕಾರ್ಯಕ್ರಮಕ್ಕೆ ವೇದಿಕೆಗೆ ಆಗಮಿಸುತ್ತಿದ್ದಂತೆ ದೇವೇಗೌಡರ ಕಾಲಿಗೆ ಬಸವರಾಜ ಬೊಮ್ಮಾಯಿ ನಮಸ್ಕರಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಯಶಸ್ಸು ಕಂಡಿದೆ. ಮನೆಯಲ್ಲಿ ಹಾಲು ಕರೆದು ಹಾಕುವ ಮಹಿಳೆಯರಿಗೆ ಧನ್ಯವಾದಗಳು. ಹಾಲಿಗೆ 5 ರೂ ಪ್ರೊತ್ಸಾಹ ಧನ ಕೊಡ್ತಿದ್ದೇವೆ. ಗೆಜ್ಜಲಗೆರೆಯಲ್ಲಿ 1 ಲಕ್ಷ ಸಾಮರ್ಥ್ಯ ಹೊಂದಿರುವ ಮೆಗಾ ಡೈರಿ ಉದ್ಘಾಟನೆ ಮಾಡಲಾಗಿದೆ. ನರೇಂದ್ರ ಮೋದಿ ಅವರು ಸಹಕಾರ ಮಾಡಿ ದೇಶದಲ್ಲಿ ಶಕ್ತಿ ತುಂಬಿದ್ದಾರೆ. ಬೆಂಗಳೂರಿನ ಮೆಗಾ ಡೈರಿ ಸ್ಥಾಪನೆಗೆ ದೇವೇಗೌಡರೇ ಕಾರಣ.  ಎಂದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ