Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಪೂಜಾರ, ಗಿಲ್ ಶತಕದಬ್ಬರ: ಭಾರತದ ಹಿಡಿತದಲ್ಲಿ ಟೆಸ್ಟ್

ಪೂಜಾರ, ಗಿಲ್ ಶತಕದಬ್ಬರ: ಭಾರತದ ಹಿಡಿತದಲ್ಲಿ ಟೆಸ್ಟ್
ಬಾಂಗ್ಲಾಗೆ 513 ರನ್ ಟಾರ್ಗೆಟ್, ಎರಡನೇ ಇನ್ನಿಂಗ್ಸ್ ನಲ್ಲಿ 258 ರನ್ ಪೇರಿಸಿದ ಭಾರತ

 

ಬಾಂಗ್ಲಾದೇಶ: ಬಾಂಗ್ಲಾದೇಶದ ಜಹೂರ್ ಅಹಮ್ಮದ್ ಚೌಧರಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ನಲ್ಲಿ ಭಾರತವು ಬೌಲಿಂಗ್,ಬ್ಯಾಟಿಂಗ್  ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ದ್ವಿತೀಯ ಇನ್ನಿಂಗ್ಸ್ ನಲ್ಲಿ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಹಾಗೂ ಅನುಭವಿ ದಾಂಡಿಗ ಚೇತೇಶ್ವರ ಪೂಜಾರ ಅಬ್ಬರದ ಶತಕದ ನೆರವಿನಿಂದ ಬಾಂಗ್ಲಾ ಗೆಲ್ಲಲು513    ರನ್ ಗಳ ಕಠಿಣ ಟಾರ್ಗೆಟ್ ನೀಡಿದೆ.


ಮೂರನೇ ದಿನದ ಅಂತ್ಯಕ್ಕೆ ಬಾಂಗ್ಲಾದೇಶ 12 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದೆ. ಇದಕ್ಕೂ ಮುನ್ನ ಭಾರತ ಪ್ರಥಮ ಇನ್ನಿಂಗ್ಸ್ ನಲ್ಲಿ 404 ರನ್ ಗಳಿಸಿದ್ದರೆ, ಬಾಂಗ್ಲಾ ತಂಡವು ಸ್ಪಿನ್ನರ್ ಕುಲದೀಪ್ ಯಾದವ್ (16-6-40-5 ) ಹಾಗೂ ವೇಗದ ಬೌಲರ್ ಸಿರಾಜ್ ಮಾರಕ ದಾಳಿಗೆ ( 13-2-20-3) ಸಿಲುಕಿ 150 ರನ್ ಗಳಿಗೆ ಸರ್ವ ಪತನವಾಯಿತು.ಅಕ್ಷರ್ ಪಟೇಲ್,ಉಮೇಶ್ ಯಾದವ್ ತಲಾ ಒಂದು ವಿಕೆಟ್ ಗಳಿಸಿದರು.
ಪ್ರಥಮ ಇನ್ನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ 90,ಶ್ರೇಯಸ್ ಅಯ್ಯರ್ 86,ಆರ್.ಅಶ್ವಿನ್ 58,ರಿಷಬ್ ಪಂತ್ 46 ಮೂಲಕ ಭಾರತ 404 ಮೊತ್ತ ಕಲೆ ಹಾಕಿತು.
ದ್ವಿತೀಯ ಇನ್ನಿಂಗ್ಸ್ ನಲ್ಲೂ ನಾಯಕ ಕೆ.ಎಲ್.ರಾಹುಲ್ ಕೇವಲ 22 ರನ್ ಗಳಿಸಿ ಔಟಾಗುವದರೊಂದಿಗೆ ಮತ್ತೆ ನಿರಾಶೆ ಮೂಡಿಸಿದರು. ಆದರೆ ಆರಂಭಿಕ ದಾಂಡಿಗ ಶುಭಮನ್ ಗಿಲ್ 10 ಬೌಂಡರಿ,2 ಸಿಕ್ಸರ್ ನೆರವಿನೊಂದಿಗೆ 152 ಎಸೆತಗಳಲ್ಲಿ 110 ರನ್ ಗಳಿಸಿ ಔಟಾದರೆ, ಚೇತೇಶ್ವರ ಪೂಜಾರ 13 ಬೌಂಡರಿ ನೆರವಿನೊಂದಿಗೆ 130 ಎಸೆತಗಳಲ್ಲಿ ಔಟಾಗದೆ 102 ರನ್ ಗಳಿಸಿದರು. ನಾಯಕ ರಾಹುಲ್ 258/2 ಇನ್ನಿಂಗ್ಸ್ ಡಿಕ್ಲೇರ್ ಘೋಷಣೆಯೊಂದಿಗೆ ಬಾಂಗ್ಲಾಗೆ 512 ರನ್ ಗಳ ಕಠಿಣ ಟಾರ್ಗೆಟ್ ನೀಡಿದ್ದಾರೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಎಚ್ಚರಿಕೆಯ ಆಟ ಆರಂಭಿಸಿದ ಬಾಂಗ್ಲಾ ತಂಡ 12 ಓವರ್ ಗಳಲ್ಲಿ 42 ರನ್ ಕಲೆ ಹಾಕಿದೆ. ಇನ್ನೂ ಎರಡು ದಿನದ ಆಟ ಬಾಕಿ ಇದ್ದು ಬಾಂಗ್ಲಾ ಗೆಲ್ಲಲು 471 ರನ್ ಗಳಿಸ ಬೇಕಾಗಿದೆ. ಭಾರತ ಗೆಲ್ಲಲು 10 ವಿಕೆಟ್ ಕಬಳಿಸಬೇಕಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ