Mysore
25
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಕುತ್ತಾರು ಕೊರಗಜ್ಜನ ಸನ್ನಿಧಿಯಲ್ಲಿ ಶಿವಣ್ಣ ಪ್ರಾರ್ಥನೆ…

ಮಂಗಳೂರು: ಕರಾವಳಿ ನಗರ ಮಂಗಳೂರಿಗೆ ವೇದ ಚಿತ್ರದ ಪ್ರಮೋಶನ್‌ ಗಾಗಿ ಆಗಮಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಿತ್ರ ತಂಡದ ಸಹಿತ ಇಲ್ಲಿನ ಪ್ರಸಿದ್ಧ ಕೊರಗಜ್ಜನ ಕ್ಷೇತ್ರ ಕುತ್ತಾರುಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಂಗಳೂರಿನ ಕುತ್ತಾರು ಬಳಿ ಇರುವ ಕೊರಗಜ್ಜನ ಆದಿಸ್ಥಳಕ್ಕೆ ಪತ್ನಿ ಗೀತಾ ಹಾಗೂ ಮಗಳೊಂದಿಗೆ ಭೇಟಿ ನೀಡಿದ ಶಿವರಾಜ್ ಕುಮಾರ್ ಕೊರಗಜ್ಜ ದೈವಕ್ಕೆ ವೀಳ್ಯದೆಲೆ, ಚಕ್ಕುಲಿ ಇಟ್ಟು ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ವೇದ ಚಿತ್ರತಂಡದ ಸದಸ್ಯರೂ ಪ್ರಾರ್ಥನೆಯಲ್ಲಿ ಭಾಗಿಯಾದರು.

ಕೊರಗಜ್ಜ ದೈವ ಈಗ ಕರ್ನಾಟಕದಾದ್ಯಂತ ಪ್ರಸಿದ್ಧವಾಗುತ್ತಿದೆ. ಬೆಂಗಳೂರು, ಮೈಸೂರಿನಲ್ಲೂ ಕೊರಗಜ್ಜನ ಕಟ್ಟೆ ಕಟ್ಟಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ವೇದ ಚಿತ್ರದ ಪ್ರಮೋಷನ್ ಗಾಗಿ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡ ಮಂಗಳೂರಿಗೆ ಆಗಮಿಸಿದ್ದಾರೆ. ಪಣಂಬೂರು ಕಡಲಕಿನಾರೆಯಲ್ಲಿ ವೇದ ಚಿತ್ರದ ಪ್ರಮೋಶನ್ ಎರ್ಪಡಿಸಲಾಗಿದೆ.

ಕುತ್ತಾರು ಕೊರಗಜ್ಜನ ದೈವಸ್ಥಾನ ಅತ್ಯಂತ ಕಾರಣಿಕ ಸ್ಥಳವಾಗಿದ್ದು ಇಲ್ಲಿ ಬಹಳಷ್ಟು ರೀತಿಯ ಸೇವೆಗಳು ನಡೆಯುತ್ತವೆ. ಇಲ್ಲಿ ಭಕ್ತರು ಅಂದುಕೊಂಡಿದ್ದು ನಡೆಯುವ ಪ್ರತೀತಿ ಇದೆ. ದೈವ ಸ್ಥಾನಕ್ಕೆ ನಿತ್ಯ ನೂರಾರು ಮಂದಿ ಭೇಟಿ ಕೊಡುತ್ತಾರೆ. ವಿವಾಹ, ಆರೋಗ್ಯ, ದಾಂಪತ್ಯ, ವಿದ್ಯಾಭ್ಯಾಸ ಸೇರಿದಂತೆ ವಿವಿಧ ಕಾರಣಗಳಿಗೆ ಹರಕೆ ಹೇಳುವ ಜನರು ಇಲ್ಲಿ ಬಂದು ಸೇವೆ ಸಲ್ಲಿಸಿ ಹೋಗುತ್ತಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!