Mysore
25
overcast clouds

Social Media

ಶುಕ್ರವಾರ, 02 ಅಕ್ಟೋಬರ್ 2026
Light
Dark

ಯಾವುದೇ ವಿದ್ಯಾರ್ಥಿವೇತನ ಸ್ಥಗಿತಗೊಳಿಸಿಲ್ಲ : ಸಚಿವ ಸೋಮಣ್ಣ ಸ್ಪಷ್ಟನೆ

ಚಾಮರಾಜನಗರ: ಎಸ್ಸಿ,ಎಸ್ಟಿ, ವಿದ್ಯಾರ್ಥಿಗಳ ಯಾವುದೇ ವಿದ್ಯಾರ್ಥಿವೇತನ ಸ್ಥಗಿತಗೊಳಿಸಿಲ್ಲ. ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ೧ ರಿಂದ ೫ನೇ ತರಗತಿ ವರೆಗಿನ ಎಸ್ಸಿ, ಎಸ್ಟಿ ಬಾಲಕರಿಗೆ ೧೦೦೦ ರೂ.ಮ ಬಾಲಕಿಯರಿಗೆ ೧೧೦೦ ರೂ., ೬ ರಿಂದ ೭ನೇ ತರಗತಿಯ ಬಾಲಕರಿಗೆ ೧೧೫೦ ರೂ., ಬಾಲಕಿಯರಿಗೆ ೧೨೫೦ ರೂ. ಸ್ಕಾಲರ್ ಶಿಪ್ ನೀಡಲಾಗುತ್ತಿದೆ ಎಂದರು.
೮ನೇ ತರಗತಿಯ ಬಾಲಕರಿಗೆ ೧೨೫೦, ಬಾಲಕಿಯರಿಗೆ ೧೩೫೦ ರೂ., ೯ ರಿಂದ ೧೦ನೇ ತರಗತಿಯ ಮಕ್ಕಳಿಗೆ ಕೇಂದ್ರದಿAದ ಶೇ.೬೦ ರಷ್ಟು ಮತ್ತು ರಾಜ್ಯದಿಂದ ಶೇ.೪೦ ರಷ್ಟು ನೀಡಲಾಗುತ್ತಿದೆ. ಮನೆಯಿಂದ ಶಾಲೆಗೆ ಹೋಗುವವರಿಗೆ ೩ ಸಾವಿರ ರೂ., ಹಾಸ್ಟೆಲ್‌ನಲ್ಲಿ ಇರುವವರಿಗೆ ೭ ಸಾವಿರ ರೂ., ವಿತರಿಸಲಾಗುತ್ತಿದೆ ಎಂದು ಹೇಳಿದರು.
ಈ ವರ್ಷ ಇಲ್ಲಿಯ ತನಕ ವಿದ್ಯಾರ್ಥಿವೇತನ ಕೋರಿ ೧ ರಿಂದ ೮ ತರಗತಿಯಿಂದ ೬.೯೧ ಲಕ್ಷ ಅರ್ಜಿ ಬಂದಿವೆ. ೯ ರಿಂದ ೧೦ ನೇ ತರಗತಿಯಿಂದ ೨.೧೦ ಲಕ್ಷ ಅರ್ಜಿ ಬಂದಿದ್ದು, ೧.೩೭ ಕೋಟಿ ರೂ. ಬಿಡುಗಡೆ ಆಗಿದೆ ಎಂದರು.
ಶಾಸಕ ಎನ್.ಮಹೇಶ್ ಮಾತನಾಡಿ, ವಿದ್ಯಾರ್ಥಿವೇತನ ಸ್ಥಗಿತ ಎಂಬುದು ಕಾಂಗ್ರೆಸ್‌ನವರ ರಾಜಕೀಯ ಪಿತೂರಿಯಾಗಿದ್ದು, ಎಸ್ಸಿಎಸ್ಟಿ ಮಕ್ಕಳನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!