ಬಾಂಡುಂಗ್: ಜಾವಾ ದ್ವೀಪದ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಒಬ್ಬ ಮೃತಪಟ್ಟು, ೧೧ ಮಂದಿ ಗಾಯಗೊಂಡಿದ್ದಾರೆ. ಅಬು ಸಲೀಂ ಅಲಿಯಾಸ್ ಆಗಸ್ ಸುಜಾತ್ನೊ ಎಂಬ ಉಗ್ರ ಈ ದಾಳಿ ನಡೆಸಿದ್ದಾನೆ. ಎರಡು ಬಾಂಬ್‌ಗಳನ್ನು ಧರಿಸಿದ್ದ ಈತ ಬೈಕ್‌ನಲ್ಲಿ ಬಂದು ಅಸ್ತಾರ್ ಅನ್ಯಾರ್ ಎಂಬಲ್ಲಿನ ಪೊಲೀಸ್ ಠಾಣೆಗೆ ನುಗ್ಗಿ, ಒಂದು ಬಾಂಬ್ ಅನ್ನು ಸ್ಛೋಟಿಸಿದ್ದಾನೆ. ಪೊಲೀಸರು ಮತ್ತೊಂದು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದರು ಎಂದು ನಗರ ಪೊಲೀಸ್ ಮುಖ್ಯಸ್ಥ ಅಸ್ವಿನ್ ಸಿಪಾಯಾಂಗ್ ಹೇಳಿದ್ದಾರೆ.