Mysore
24
clear sky

Social Media

ಗುರುವಾರ, 24 ಏಪ್ರಿಲ 2025
Light
Dark

ಕಣ್ಮರೆಯಾದ ನಂಜನಗೂಡಿನ ‘ಅಪೊಲೊ’ ವೃತ್ತದ ವಿಶೇಷ

ನಂಜನಗೂಡು- ಮೈಸೂರು ರಸ್ತೆಯಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಚಾಮಲಾಪುರದ ಹುಂಡಿ ವೃತ್ತ ಇದೆ. ಇದನ್ನು ಹಿಂದೆ ತಾಲ್ಲೂಕು ಪಂಚಾಯಿತಿ ವೃತ್ತ, ಅದಕ್ಕೂ ಹಿಂದೆ ಬಿಡಿಒ (ತಾಲ್ಲೂಕು ಅಭಿವೃದ್ಧಿ ಅಧಿಕಾರಿ) ಆಫೀಸ್ ಸರ್ಕಲ್ ಎಂದು ಕರೆಲಾಗುತ್ತಿತ್ತು. ಆದರೆ, ಈ ಸಂಬಂಧ ಯಾವುದೇ ಅಧಿಕೃತ ನಾಮಫಲಕ ಇಲ್ಲ. ವಾಸ್ತವವಾಗಿ ಈ ವೃತ್ತಕ್ಕೆ ಬಹಳ ಹಿಂದೆ ನಾಮಫಲಕ ಅಳವಡಿಸಲಾಗಿತ್ತು. ಅದರಲ್ಲಿ ಇದ್ದ ಹೆಸರು ಯಾವುದು ಗೊತ್ತೆ? ‘ಅಪೊಲೊ ವೃತ್ತ!’.

ವಿದೇಶಗಳ ಸಾಧನೆಗೆ ಪರೋಕ್ಷವಾಗಿ ಮೆಚ್ಚುಗೆ ಸೂಚಿಸುವ ಉದ್ದೇಶದಿಂದ ನಂಜನಗೂಡಿನಲ್ಲಿ ವೃತ್ತವೊಂದಕ್ಕೆ ಅಪೊಲೊ ವೃತ್ತ ಎಂದು ನಾಮಕಾರಣ ಮಾಡಲಾಗಿತ್ತು. ಇದೊಂದು ರೀತಿಯಲ್ಲಿ ವಿಚಿತ್ರವಾಗಿ ಕಾಣಬಹುದು. ಆದರೆ, ನಿಜವಾಗಿ ಇದರ ಹಿಂದೆ ಅಮೆರಿಕ, ರಷ್ಯಾ ಸಾಧನೆಗಳ ಪ್ರಸಂಗದ ನಂಟು ಇದೆ. ಅದೇನೆಂದರೆ, ಅಮೆರಿಕ ದೇಶವು ಅಪೊಲೊ ಮತ್ತು ರಷ್ಯಾ ದೇಶವು ಸೂಯಿಜ್ ಎಂಬ ಅಂತರಿಕ್ಷ ಉಪಗ್ರಹಗಳನ್ನು ಉಡಾವಣೆ ಮಾಡಿದ್ದಲ್ಲದೆ, ಮಾರ್ಗಮಧ್ಯೆ ಒಂದನ್ನೊಂದು ಕೂಡಿಕೊಂಡು ಪಯಣ ಬೆಳೆಸಿದ್ದವು ಎನ್ನಲಾಗಿದೆ. ಅದರ ಸ್ಮರಣಾರ್ಥ ನಂಜನಗೂಡಿನಲ್ಲಿ ಅಪೊಲೊ (ಅಮೆರಿಕ ಉಪಗ್ರಹ) ವೃತ್ತಕ್ಕೆ ನಾಮಕರಣ ಮಾಡಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ