Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಬಿರ್ಸಾ ಮುಂಡಾ ಅವರ ಜನ್ಮಜಯಂತಿ ಅಂಗವಾಗಿ ಸಾಂಸ್ಕೃತಿಕ ಮೆರವಣಿಗೆ

ಮೈಸೂರು: ಬುಡಕಟ್ಟು ಜನರ ಸಾಂಪ್ರದಾಯ ನೃತ್ಯ.., ಗೊರವನ ವೇಶ.., ಕೋಣದ ಮುಖವಾಡ…, ಕೋವಿ ಹಿಡಿದ ಆದಿವಾಸಿಗಳು…, ಭೂತ ಕುಣಿತ.., ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ್ದ ಬುಡಕಟ್ಟು ಜನರು ತಮ್ಮ ಕಲೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರು.

ಬುಡಕಟ್ಟು ಜನಾಂಗದ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮಜಯಂತಿ ಹಾಗೂ ಜನ ಜಾತೀಯ ಗೌರವ ದಿವಸ್ ಅಂಗವಾಗಿ ನಗರದ ಅರಮನೆ ಮುಂಭಾಗ ಏರ್ಪಡಿಸಲಾಗಿದ್ದ ಬುಡಕಟ್ಟು ಜನರ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಈ ದೃಷ್ಯಗಳು ಕಂಡುಬಂದವು. ಮೆರವಣಿಗೆಗೆ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಶಾಸಕ ಅಶ್ವಿನ್‌ಕುಮಾರ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಾನು ನನ್ನ ಜೀವನದ ಕೆಲ ಸಮಯವನ್ನು ಬುಡಕಟ್ಟು ಜನಾಂಗದ ಸೋದರ-ಸೋದರಿಯರು ಮತ್ತು ಮಕ್ಕಳೊಂದಿಗೆ ಕಳೆದಿದ್ದೇನೆ. ಅವರ ಜೀವನದ ಸುಖ-ಸಂತೋಷಗಳು, ದೈನಂದಿನ ಜೀವನ ಮತ್ತು ಅವರ ಜೀವನದ ಅವಶ್ಯಕತೆಗಳನ್ನು ನೋಡಿದ್ದೇನೆ ಎಂದು ಹೇಳಿದರು.
ಬುಡಕಟ್ಟು ಹಾಗೂ ಆದಿವಾಸಿಗಳ ಜೀವನ ಇಂದಿಗೂ ಸಂಕಷ್ಟದಲ್ಲಿದೆ. ಅವರು ಇಂದಿಗೂ ಕನಿಷ್ಠ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಅವರುಗಳನ್ನು ಮುಖ್ಯವಾಹಿನಿಗೆ ತರಲು ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಬುಡಕಟ್ಟು ಸಮುದಾಯದ ನಾಯಕರಾದ ಬಿರ್ಸಾ ಮುಂಡಾ ಅಂದಿನ ಬಂಗಾಳ ಹಾಗೂ ಇಂದಿನ ಜಾರ್ಖಂಡ್‌ನಲ್ಲಿ ಬ್ರಿಟಿಷರ ವಿರುದ್ಧ ದಂಗೆ ಏಳುವ ಮೂಲಕ ಬುಡುಕಟ್ಟು ಸಮುದಾಯದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದರು. ನಂತರ ಸಾಕಷ್ಟು ಹೋರಾಟಗಳಲ್ಲಿ ಅವರು ಹೆಸರುವಾಸಿಯಾಗಿದ್ದರು ಎಂದರು.

ಅವರ ಜಯಂತಿಯಂದು ಬುಡಕಟ್ಟು ಜನರನ್ನು ಬಳಸಿಕೊಂಡು ಕಾರ್ಯಕ್ರಮ ರೂಪಿಸಿರುವುದು ಸಂತಸದ ಸಂಗತಿ. ಅವರಿಗೂ ಕೂಡ ನಾಗರೀಕ ಪ್ರಪಂಚತ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬುಡಕಟ್ಟು ವ್ಯವಹಾರಗಳ ಇಲಾಖೆಯ ಕಾರ್ಯವೈಖರಿ ಪ್ರಶಂಸನೀಯ ಎಂದರು.

ಅರಮನೆ ಮುಂಭಾಗದಿಂದ ಆರಂಭವಾದ ಸಾಂಸ್ಕೃತಿಕ ಮೆರವಣಿಗೆ ನಗರದ ದೇವರಾಜ ಅರಸು ರಸ್ತೆಯ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಂತ್ಯಗೊಂಡಿತು. ಬುಡಕಟ್ಟು ಜನರ ಮೆರವಣಿಗೆ ಅಕ್ಷರಶಃ ದಸರಾ ಮೆರವಣಿಗೆಯನ್ನು ನೆನಪಿಸುವಂತಿತ್ತು.

ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಉಪ ಮಹಾಪೌರರಾದ ಡಾ.ಜಿ.ರೂಪ, ಅಧಿಕಾರಿಗಳಾದ ಕಾಂತರಾಜು, ರಾಜೇಶ್ ಜಿ ಗೌಡ ಮುಂತಾದವರು ಭಾಗವಹಿಸಿದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ