Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಸೆರೆ ಸಿಕ್ಕ ಚಿರತೆ ನಿಟ್ಟುಸಿರು ಬಿಟ್ಟ ಜನತೆ 

ಹನೂರು : ಹಲವಾರು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ನರಭಕ್ಷಕ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದ್ದಾರೆ .

ತಾಲೂಕಿನ ಕೆ ವಿ ಎನ್ ದೊಡ್ಡಿ, ಕೆಂಚಯ್ಯನದೊಡ್ಡಿ, ಭಾಗದ ಜನರನ್ನು ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಕೆಂಚಯ್ಯನದೊಡ್ಡಿಗ್ರಾಮದ ಅರಣ್ಯ ಪ್ರದೇಶದ  ಬಳಿ ಅರಣ್ಯ ಇಲಾಖೆಯ  ಬೋನಿಗೆ ಬಿದ್ದಿದೆ.

ಸೆರೆ ಸಿಕ್ಕ ಚಿರತೆ : ಹಲವಾರು ಹಸು, ಮೇಕೆಗಳು ಸಾಲದು ಎಂಬಂತೆ ಮನುಷ್ಯನನ್ನು ಸಹ ಕೊಂದು ಈ ಭಾಗದ ಜನರ ನಿದ್ದೆಗೆಡಿಸಿತ್ತು.ಹಲವಾರು ದಿನಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೂ ಸಹ ನಿದ್ದೆಗೆಡಿಸಿತ್ತು.  ಇದರಿಂದ ಎಲ್ಲರಿಗೂ ತೊಂದರೆಯಾಗಿತ್ತು. ಕೊನೆಗೂ ಕೆಂಚಯ್ಯನದೊಡ್ಡಿ ಬಳಿ ಸಿಕ್ಕಿ ಬಿದ್ದಿದೆ.

ನಿಟ್ಟುಸಿರು ಬಿಟ್ಟ ಜನತೆ : ಈ ಭಾಗದ ಜನತೆ ಕಳೆದ ಹಲವಾರು ದಿನಗಳಿಂದ ಜೀವ ಭಯದಲ್ಲೇ ಕಾಲ ದೂಡುತ್ತಿದ್ದರು.ಕಾಡಿಗೆ ತೆರಳಲು ಹಸು ಕರುಗಳಿಗೆ ಮೇವು ತರಲು ಸಹ ಜನ ಕಷ್ಟ ಪಡುವಂತಹ ಸಮಯ ತುಂಬಾ ಇತ್ತು.. ಚಿರತೆ ಭಯದಲ್ಲಿ ಜನ ತುಂಬಾ ಹೈರಾಣಗಿದ್ದರು.ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸೆರೆಹಿಡಿಯುವಂತೆ ಒತ್ತಾಯಿಸಿದ್ದರು. ಕೊನೆಗೂ ಚಿರತೆ ಸೆರೆ ಸಿಕ್ಕಿ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ