ಮೈಸೂರು: ಇಲ್ಲಿನ ಕೂರ್ಗಳ್ಳಿಯಲ್ಲಿನ ಕೆ.ಎಸ್.ಬಿ.ಸಿ.ಎಲ್ ಲಿಕ್ಕರ್ ಡಿಪೋದಲ್ಲಿ ಮಾರಾಟವಾಗದೇ ಉಳಿದಿರುವ ಒಟ್ಟು 549 ಲೀಟರ್ ವೈನ್ ದಾಸ್ತಾನನ್ನು ನಾಶಪಡಿಸಲಾಗಿದೆ.
ನವೆಂಬರ್ 15 ರಂದು ಮೈಸೂರು ಉವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಹೆಚ್.ಕೆ.ರಮೇಶ್ ರವರ ನೇತೃತ್ವದಲ್ಲಿ, ಕೆ.ಎಸ್.ಬಿ.ಸಿ.ಎಲ್. ಕೂರ್ಗಳ್ಳಿ ಡಿಪೋನ ವ್ಯವಸ್ಥಾಪಕರು ಹಾಗೂ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಕೂರ್ಗಳ್ಳಿಯಲ್ಲಿನ ಕೆ.ಎಸ್.ಬಿ.ಸಿ.ಎಲ್. ಲಿಕ್ಕರ್ ಡಿಪೋದಲ್ಲಿ ಮಾರಾಟವಾಗದೇ ಉಳಿದಿರುವ ಒಟ್ಟು 549 ಲೀಟರ್ ವೈನ್ ದಾಸ್ತಾನನ್ನು ನಾಶಪಡಿಸಲಾಗಿದೆ ಎಂದು ಮೈಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.