Mysore
16
scattered clouds

Social Media

ಶುಕ್ರವಾರ, 09 ಜನವರಿ 2026
Light
Dark

ಓದುಗರ ಪತ್ರ: ಅಮ್ಮ ಎಂದರೆ…

ಅಮ್ಮ ಎಂದರೆ…

೯ ತಿಂಗಳು ಹೊತ್ತು ಹೆತ್ತವಳು ಅಮ್ಮ

ಸತ್ತು ಬದುಕಿ ಜನ್ಮವಿತ್ತವಳು

ಮಡಿಲಲ್ಲಿ ಕಂದನ ಕಂಡು

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದಳು ಅಮ್ಮ

ಉಸಿರ ಬಸಿದು ಆಸರೆಯಾದಳು

ಮಗುವಿಗೆ ಅಮ್ಮ

ಕಂದ ಎಡವಿದರೆ ನೊಂದವಳು

ತಿದ್ದಿ ತೀಡಿ ಕಲಿಸಲು ಕಳಿಸಿದ ಆ ಬ್ರಹ್ಮ

ಹುಟ್ಟಿದಾಗ ತೊದಲ್ನುಡಿ- ಸಾಯು

ವಾಗ ಕೊನೆ ನುಡಿ ಅಮ್ಮ

ಬಾಲ್ಯದಿಂದ ಮುಪ್ಪಿನವರೆಗೂ ಉಸಿರಲ್ಲಿ ಬೆರೆತವಳು ಅಮ್ಮ

ಆದರೆ ಇವಳಿಗೆ ಮುಪ್ಪು ಆವರಿಸಿದಾಗ ಏಕೆ ಆಶ್ರಮ ?

ಮುಕ್ಕೋಟಿ ದೇವತೆಗಳಿಗೂ ಮಿಗಿಲು ಅಮ್ಮ

ತೀರಿಸಲಾದೀತೆ ಅವಳ ಋಣ ಈ ಜನ್ಮ

– ಕಲಾ ಜಗನ್ನಾಥ್, ಎಚ್.ಡಿ.ಕೋಟೆ 

Tags:
error: Content is protected !!