ಈಗ ಮೊಬೈಲ್ ಯುಗವಾಗಿದ್ದು, ಮೊಬೈಲ್ ಇಲ್ಲದೆ ಯಾವ ಕೆಲಸವೂ ಅಸಾಧ್ಯ ಎನ್ನುವಂತಾಗಿದೆ. ಮೊಬೈಲ್‌ನಿಂದ ಎಷ್ಟು ಉಪಯೋಗವಿದೆಯೋ, ಅಷ್ಟೇ ದುರುಪಯೋಗವೂ ಇದೆ. ಮೊಬೈಲ್‌ನಲ್ಲಿ ಇರುವಂಥ ಸಾಮಾಜಿಕ ಮಾಧ್ಯಮವಾದ ಫೇಸ್ ಬುಕ್ ನಲ್ಲಿ ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ತರುವಂಥ ಕೆಲಸ ನಡೆಯುತ್ತಿದೆ.
ಹೆಣ್ಣು ಮಕ್ಕಳ ಅಶ್ಲೀಲ ದೃಶ್ಯಗಳು, ಸಂಭಾಷಣೆಗಳನ್ನು ಹಾಕುತ್ತಾರೆ. ಅದಕ್ಕೆ ತಕ್ಕ ಹಾಗೆ ಅಶ್ಲೀಲ ಕಾಮೆಂಟ್‌ಗಳೂ ಬರುತ್ತದೆ. ಇದು ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ತರುವಂತಹ ವಿಷಯವಾಗಿದೆ. ಇದನ್ನು ನೋಡುವ ಹದಿಹರೆಯದ ಮಕ್ಕಳು ಅಡ್ಡದಾರಿಯನ್ನು ಹಿಡಿಯುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಹರಿಯ ಬಿಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕಾಗಿದೆ.
– ಎಂ.ಎಸ್.ಉಷಾ ಪ್ರಕಾಶ್, ಮೈಸೂರು





