ನಾಡದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಜನರು ಬರುತ್ತಾರೆ. ಆದರೆ ಚಾಮುಂಡೇಶ್ವರಿ ದೇವಾಲಯದ ಬಳಿ ಇರುವ ಚಪ್ಪಲಿ ಸ್ಟ್ಯಾಂಡ್‌ನಲ್ಲಿ ಚಪ್ಪಲಿ ಬಿಟ್ಟ ಮೇಲೆ ಕೈ ತೊಳೆಯಲು ನೀರು ಒದಗಿಸದೇ ಇರುವುದರಿಂದ ಭಕ್ತಾದಿಗಳು ಚಪ್ಪಲಿ ಮುಟ್ಟಿದ ಕೈಯಲ್ಲಿಯೇ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯುವುದು ಅನಿವಾರ್ಯವಾಗಿದೆ.
ದೇವಿಗೆ ನೈವೇದ್ಯ ಮಾಡಿಸಲು ಹಣ್ಣು, ಕಾಯಿ ಖರೀದಿಸುವವರಿಗೆ ವ್ಯಾಪಾರಿಗಳು ಬಾಟಲಿಯಲ್ಲಿ ಕೈಗೆ ನೀರು ಸಿಂಪಡಿಸುತ್ತಾರೆ. ಆದರೆ ಹಣ್ಣು ಕಾಯಿ ಖರೀದಿಸದೇ ಇರುವವರು ಅನಿವಾರ್ಯವಾಗಿ ಪಕ್ಕದ ಅಂಗಡಿಯಲ್ಲಿ ನೀರಿನ ಬಾಟಲಿ ತೆಗೆದುಕೊಂಡು ಕೈ ತೊಳೆದುಕೊಂಡು ದೇವರ ದರ್ಶನ ಮಾಡಬೇಕಾಗಿದೆ. ನೀರಿನ ಬಾಟಲಿ ಖರೀದಿಸಲು ಕನಿಷ್ಠ ೨೦ ರೂ.ಗಳನ್ನು ನೀಡಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಚಪ್ಪಲಿ ಸ್ಟಾ ಂಡ್ ಬಳಿ ಭಕ್ತರಿಗೆ ಕೈತೊಳೆಯಲು ನೀರಿನ ವ್ಯವಸ್ಥೆ ಮಾಡುವ ಮೂಲಕ ಅನುಕೂಲ ಕಲ್ಪಿಸಬೇಕಾಗಿದೆ.
-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು





