Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯವೆಂದು ಹೇಳಿ ಕನ್ನಭಾಗ್ಯವನ್ನು ಕೊಟ್ಟಿದ್ದಾರೆ. ಸರ್ಕಾರದಿಂದ ಅನ್ನವನ್ನು ನೀಡಬೇಕೆ ಹೊರತು, ಅನ್ನವನ್ನು ಕದ್ದಿಯುವಂತೆ ನಡೆದುಕೊಳ್ಳಬಾರದು ಎಂದು ಸರ್ಕಾರದ ವಿರುದ್ಧ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ನಗರದ ಅರಸು ಕಾಲೋನಿಯಲ್ಲಿ ಇಂದು (ನ.21) ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ
ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಅಂಕಿ ಅಂಶಗಳ ಪ್ರಕಾರ ಸರ್ಕಾರಿ ನೌಕರರಿರುವುದು 250 ಜನ ಅಷ್ಟೇ. ಆದರೆ ಸರ್ಕಾರ ಲಕ್ಷಾಂತರ ಜನರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಿದೆ. ಕೇವಲ 250 ಜನ ಸರ್ಕಾರ ನೌಕರರಿಗಾಗಿ 12 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಒಂದು ಕಡೆ ಸುದ್ದಿಗೋಷ್ಠಿ ನಡೆಸಿ ರಾಜ್ಯದ ಜನತೆಗೆ ಈ ವಿಚಾರದ ಬಗ್ಗೆ ಭಯ ಬೀಳಬೇಡಿ ಎಂದು ಹೇಳುತ್ತಾರೆ. ಆದರೆ ಮತ್ತೊಂದು ಕಡೆ ಆಹಾರ ಸಚಿವರು ಬಿಪಿಎಲ್‌ ಕಾರ್ಡ್‌ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಎಂದು ಹೇಳುತ್ತಾರೆ. ಸರ್ಕಾರವೇ ಇಲ್ಲಿ ತಪ್ಪು ಮಾಡಿ ಬಿಪಿಎಲ್‌ ಕಾರ್ಡ್‌ ರದ್ದುದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಎಂದರೆ ಏನು ಅರ್ಥ? ಬಹುಶಃ ರೇಷನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ವೇಳೆ ಒಬ್ಬೊಬ್ಬರಿಂದ 15 ಸಾವಿರ ಲಂಚ ಪಡೆಯಲು ಪಿತೂರಿ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಅರ್ಜಿ ಹಾಕಬಾರದು. ಸರ್ಕಾರದಿಂದ ಬಿಪಿಎಲ್‌ ಕಾರ್ಡ್‌ ರದ್ದು ಮಾರುವಾಗ ಅರ್ಜಿ ನೀಡಿರಲಿಲ್ಲ ಅಥವಾ ನೋಟಿಸ್‌ ಕೊಟ್ಟಿರಲಿಲ್ಲ. ಬಿಪಿಎಲ್‌ ಕಾರ್ಡ್‌ ರದ್ದು ಮಾಡುವಾಗ ಸರ್ಕಾರದ ಅಧಿಕಾರಿಗಳು ಏನು ಮಾಡುತ್ತಿದ್ದರು? ಈಗ ರದ್ದಾಗಿರುವ ಎಲ್ಲಾ ಕಾರ್ಡ್‌ಗಳು ಪುನಃ ಹಾಗೆಯೇ ರಿಟ್ರೈ ಆಗಬೇಕು. ಸರ್ಕಾರ ಮಾಡಿರುವ ತಪ್ಪಿಗೆ ಬಡವರಿಗೆ ಯಾಕೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Tags: