Mysore
18
clear sky

Social Media

ಶನಿವಾರ, 03 ಜನವರಿ 2026
Light
Dark

ಪಾಕ್‌ ರೈಲು ಹೈಜಾಕ್‌: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ನವದೆಹಲಿ: ಪಾಕಿಸ್ತಾನ ದೇಶದ ವಿದೇಶಾಂಗ ಕಚೇರಿಯೂ, ಬಲೂಚಿಸ್ತಾನದಲ್ಲಿ ನಡೆದ ಜಾಫರ್ ಎಕ್ಸ್‌ಪ್ರೆಸ್ ರೈಲು ಅಪಹರಣದಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದರು, ಇದೀಗ ಪಾಕ್‌ ಆರೋಪಕ್ಕೆ ಖಡಕ್‌ ಆಗಿ ಭಾರತ ತಿರುಗೇಟು ನೀಡಿದೆ.

ಈ ಕುರಿತು ಪ್ರತಿಕಿಯೆ ನೀಡಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವು, ಪಾಕಿಸ್ತಾನದ ಆರೋಪ ಆಧಾರ ರಹಿತವಾಗಿದೆ. ಜಾಗತಿಕ ಭಯೋತ್ಪಾದನೆಯ ಕೇಂದ್ರ ಬಿಂದು ಎಲ್ಲಿದೆ ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ. ಅಲ್ಲದೇ ತನ್ನ ಆಂತರಿಕ ಸಮಸ್ಯೆ ಮತ್ತು ವೈಫಲ್ಯಗಳಿಗೆ ಭಾರತ ಸೇರಿದಂತೆ ಇನ್ನಿತರ ದೇಶಗಳನ್ನು ಬೆಟ್ಟು ಮಾಡಿ ತೋರಿಸುವ ಬದಲು, ತನ್ನನ್ನು ತಾನು ಪರಾಮರ್ಶಿಸಿಕೊಳ್ಳಬೇಕು. ಹೀಗಾಗಿ ನಾವು ಈ ಆರೋಪವನ್ನು ತಿರಸ್ಕರಿಸುತ್ತೇವೆ ಎಂದು ಹೇಳಿದರು.

ಇನ್ನು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ಶಫ್ಕತ್‌ ಅಲಿ ಖಾನ್‌ ಅವರು, ಜಾಫರ್‌ ಎಕ್ಸ್‌ಪ್ರೆಸ್‌ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಬಂಡುಕೋರರು ಅಫ್ಘಾನಿಸ್ತಾನದ ರಿಂಗ್‌ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿದ್ದರು.

Tags:
error: Content is protected !!