Mysore
18
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಮಂಡ್ಯ:ವಕ್ಫ್‌ ವಿರುದ್ಧ ʻನಮ್ಮ ಭೂಮಿ ನಮ್ಮ ಹಕ್ಕುʼ ಆಂದೋಲನ

ಮಂಡ್ಯ: ರಾಜ್ಯ ಸರ್ಕಾರ ವಕ್ಫ್ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ನವೆಂಬರ್ ೨೨ರಂದು ನಗರದ ಸರ್.ಎಂ.ವಿ ಪ್ರತಿಮೆಯ ಎದುರು ನಮ್ಮಭೂಮಿ, ನಮ್ಮ ಹಕ್ಕು ಶೀರ್ಷಿಕೆಯಡಿ ಜನಜಾಗೃತಿ ಆಂದೋಲನ ಹೋರಾಟ ನಡಸಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಇಂದ್ರೇಶ್ ತಿಳಿಸಿದರು.

ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ವಕ್ಫ್‌ನ ಭೂಮಿ ಕಾಯ್ದೆಯ ನೋಟಿಸ್‌ನಿಂದಾಗಿ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು, ರೈತರು, ಮಠ ಮಂದಿರಗಳು, ಶಾಲೆಗಳು ಸೇರಿದಂತೆ ಸಾರ್ವಜನಿಕ ಆಸ್ತಿ ಮಾಲೀಕರು ಶೋಷಣೆಗೆ ಒಳಗಾಗಿದ್ದು, ಅವುಗಳನ್ನು ಆಲಿಸಲು ವೇದಿಕೆ ಸೃಷ್ಠಿಸಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದರು.

ವಕ್ಫ್‌ನ ಭೂಮಿ ಕಾಯ್ದೆಯಿಂದ ಆಗಿರುವ ಅನಾಹುತಗಳನ್ನು ಅರಿಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ೩ ತಂಡಗಳನ್ನು ರಚನೆ ಮಾಡಿದ್ದು, ಸ್ವಯಂ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ವಿ.ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ್ ನೇತೃತ್ವ ವಹಿಸಿ ಡಿಸೆಂಬರ್ ಮಾಹೆಯ ಮೊದಲವಾರ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಸ್ಯೆ ಆಲಿಸಿ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪ ಮಾಡುವ, ಚರ್ಚೆಸುವ ಕ್ರಮ ಕೈಗೊಳ್ಳಲಿದ್ದಾರೆ ಎಂದು ನುಡಿದರು.

ವಕ್ಫ್ ಸಂಬಂಧ ರಾಜ್ಯಾದ್ಯಂತ ಸಮಸ್ಯೆಗಳು ಎದುರಿಸುವಂತಾಗಿದ್ದು, ಡಿಸೆಂಬರ್‌ನಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಒಳಗೆ ನಾಯಕರು ಹೋರಾಟ ನಡೆಸಲಿದ್ದು, ಹೊರಗಡೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಭಟನೆ ಮಾಡಲಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿಯೂ ಸಮಸ್ಯೆ ಎರುರಾಗಿದ್ದು, ಮದ್ದೂರಿನಲ್ಲಿ ೩೩೨, ಶ್ರೀರಂಗಪಟ್ಟಣದಲ್ಲಿ ೧೮, ನಾಗಮಂಗಲದಲ್ಲಿ ೫ ಪ್ರಕರಣಗಳು ಗಮನಕ್ಕೆ ಬಂದಿದ್ದು, ನವೆಂಬರ್ ೨೨ರಂದು ನಡೆಯುವ ಪ್ರತಿಭಟನೆಯಲ್ಲಿ ಸುಮಾರು ೧೫೦೦ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಸಿ.ಟಿ.ಮಂಜುನಾಥ್, ನಾಗಾನಂದ್ ಇದ್ದರು.

Tags:
error: Content is protected !!