ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ನಾಯಕರು ಪ್ರತಿಭಟನೆ ಮುಂದುವರೆಸಿದ್ದಾರೆ.
ಈ ಕುರಿತು ಇಂದು(ಡಿ.5) ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಮೋದಿ ಅದಾನಿ ಏಕ್ ಹೈ, ಅದಾನಿ ಸೇಫ್ ಹೈ ಎಂದು ಬರೆದಿರುವ ಜಾಕೆಟ್ ಧರಿಸಿ ನೂತನ ರೀತಿಯಲ್ಲಿ ಪ್ರಧಾನಿ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಈ ಸಂದರ್ಭದಲ್ಲಿ ರಾಹುಲ್ ಅವರು ಪ್ರತಿಕ್ರಿಯೆ ನೀಡಿ, ಅದಾನಿ ವಿರುದ್ಧ ಮೋದಿ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ. ಒಂದು ವೇಳೆ ತನಿಖೆಗೆ ಆದೇಶ ನೀಡಿದರೆ ಸ್ವತಃ ಮೋದಿ ಅವರೇ ತನಿಖೆ ಎದುರಿಸಬೇಕಾಗುತ್ತದೆ. ಮೋದಿ ಮತ್ತು ಅದಾನಿ ವಂಚನೆ ಪ್ರಕರಣದಲ್ಲಿ ಒಂದೇ ಆಗಿದ್ದಾರೆ. ಅವರಿಬ್ಬರು ಬೇರೆ ಬೇರೆ ಅಲ್ಲ, ಒಂದೇ ಆಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ವಿಪಕ್ಷ ಸಂಸದರಾದ ಪ್ರಿಯಾಂಕಾ ಗಾಂಧಿ ಅವರು ಸಾಥ್ ನೀಡಿದ್ದು, ಅದಾನಿ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿ, ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.





