Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸಾಹಿತ್ಯ ಸಮ್ಮೇಳನ: ನೊಂದಣಿಯಾಗುವ ಪ್ರತಿನಿಧಿಗಳಿಗೆ ಸಿಹಿ ಬೆಲ್ಲ

ಮಂಡ್ಯ: 87 ನೇ ಅಖಿಲ ಭಾರತ ಕನ್ಮಡ ಸಾಹಿತ್ಯ ಸಮ್ನೇಳನದಲ್ಲಿ ಪ್ರತಿನಿಧಿಯಾಗಿ ನೊಂದಣಿಯಾಗುವ ಸದಸ್ಯರಿಗೆ ಜಿಲ್ಲೆಯ ಸವಿ ನೆನಪಿಗಾಗಿ ಬೆಲ್ಲವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಲ್ಲ ತಯಾರಿಕ ಎಫ್.ಪಿ.ಓ ಘಟಕಗಳ ಸಭೆ ನಡೆಸಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿ ಪ್ರತಿನಿಧಿಗಳಿಗೆ ಬೆಲ್ಲ ನೀಡುವುದರಿಂದ ಜನರಿಗೆ ಬೆಲ್ಲದ ಬಗ್ಗೆ ಹೆಚ್ಚಿನ ಪ್ರಚಾರವಾಗುತ್ತದೆ ಎಂದರು.

ಸುಮಾರು 10000 ಜನರು ನೊಂದಣಿಯಾಗುವ ನಿರೀಕ್ಷೆ ಇದೆ. ಪ್ರತಿಬಿಧಿಗಳಿಗೆ ಹಾಗೂ ಗಣ್ಯರಿಗೆ ಅರ್ಧ ಕೆ.ಜಿ ಬೆಲ್ಲ ನೀಡಿದರೆ ಸುಮಾರು 6 ರಿಂದ 7 ಸಾವಿರ ಕೆ.ಜಿ ಬೆಲ್ಲ ಬೇಕಾಗುತ್ತದೆ. ಬೆಲ್ಲ ತಯಾರಿಕೆ ಘಟಕಗಳು ಉತ್ತಮವಾಗಿ ಪ್ಯಾಕೇಜ್ ಮಾಡಿ ಅದರ ಮೇಲೆ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ ಮುದ್ರಣ ಸೇರಿದಂತೆ ಒಂದೇ ರೀತಿ ಪ್ಯಾಕೇಜ್ ಮಾಡಿ ನೀಡುವಂತೆ ತಿಳಿಸಿದರು.

ಒಂದು ಉತ್ತಮ ದರ ನಿಗದಿ ಮಾಡಿ ಬೆಲ್ಲ ನೀಡಲು ಮುಂದೆ ಬರುವವರು ಕೃಷಿ ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ ಗುಣಮಟ್ಟದ ಬೆಲ್ಲವನ್ನು ನೀಡಿ ಇದರಿಂದ ಜಿಲ್ಲೆಯ ಹೆಸರು ಎಲ್ಲಾ ಕಡೆ ಪಸರಿಸುತ್ತದೆ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಂಟಿ ಕೃಷಿ ನಿರ್ದೇಶಕ ಅಶೋಕ್ ಸೇರಿದಂತೆ ಎಫ್. ಪಿ.ಓ ಘಟಕಗಳ ಮುಖ್ಯಸ್ಥರಾದ ಮಹದೇವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: