Mysore
28
overcast clouds

Social Media

ಭಾನುವಾರ, 14 ಜೂನ್ 2026
Light
Dark

ಕೊಳ್ಳೇಗಾಲ | ಕಾವೇರಿ ನದಿಯಲ್ಲಿ ಶಿಶು ಮೃತದೇಹ ಪತ್ತೆ

ಕೊಳ್ಳೇಗಾಲ: ಸುಮಾರು ಒಂದು ತಿಂಗಳ ಹೆಣ್ಣು ಮಗುವೊಂದರ ಶವ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.

child dead body

ತಾಲ್ಲೂಕಿನ ಹರಳೆ ಗ್ರಾಮದ ನದಿ ದಡದಲ್ಲಿ ತೆರಳುತ್ತಿದ್ದ ಗ್ರಾಮಸ್ಥರು ಮಗುವಿನ ಮೃತದೇಹವನ್ನು ಕಂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ನದಿಯಿಂದ ಶಿಶುವನ್ನು ಮೇಲೆತ್ತಿ ಚಾ.ನಗರ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.

ಮಗುವನ್ನು ಯಾರೋ ತಂದು ನದಿಗೆ ಬೀಸಾಡಿರಬಹುದು ಎಂದು ಶಂಕಿಸಲಾಗಿದೆ. ಶಿಶು ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ಪೋಷಕರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಮಗುವಿನ ವಾರಸುದಾರರು ಯಾರೂ ಪತ್ತೆಯಾಗದಿದ್ದಲ್ಲಿ ಒಂದು ವಾರದ ಬಳಿಕ ಶವಸಂಸ್ಕಾರ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:
error: Content is protected !!