Mysore
25
broken clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ನಟಿ ಲೀಲಾವತಿ ಎಸ್ಟೇಟ್‌ ಬಳಿ ಅಗ್ನಿ ಅವಘಡ: ತಪ್ಪಿದ ಅನಾಹುತ

ನೆಲಮಂಗಲ: ಹಿರಿಯ ನಟಿ ದಿ.ಲೀಲಾವತಿ ಎಸ್ಟೇಟ್‌ ಬಳಿ ಬೆಂಕಿ ಅವಘಡ ಸಂಭವಿಸಿದ್ದು, ತೋಟದ ಸಿಬ್ಬಂದಿ ಬೆಂಕಿ ನಂದಿಸಿ ಆಗುತ್ತಿದ್ದ ಆನಾಹುತ ತಪ್ಪಿಸಿದ್ದಾರೆ.

ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲನದೇವನಹಳ್ಳಿಯಲ್ಲಿರುವ ಇವರ ಎಸ್ಟೇಟ್‌ ಪಕ್ಕದ ಅರಣ್ಯ ಪ್ರದೇಶದ ರೈತರ ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕೋಡಲೇ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿನೋದ್‌ ರಾಜ್‌ ತೋಟದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಬೇಸಿಗೆ ಹಿನ್ನಲೆ ಒಣಗಿದ ಅರಣ್ಯದಿಂದ ಕಾಡ್ಗಿಚ್ಚು ಉಂಟಾಗಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಸಂಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

Tags: