Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ವಿ.ಸೋಮಣ್ಣ ಮುಖಾಮುಖಿ: ಮುಡಾದ ಬಗ್ಗೆ ಸ್ವಾರಸ್ಯಕರ ಚರ್ಚೆ

ಬೆಂಗಳೂರು: ನಗರದ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಮುಖಾಮುಖಿಯಾಗಿದ್ದು, ಮುಡಾ ಪ್ರಕರಣದ ಬಗ್ಗೆ ಸ್ವಾಮರಸ್ಯಕರ ಚರ್ಚೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿಂದು ಬೆಳಗಿನ ಉಪಹಾರಕ್ಕಾಗಿ ಮುಖಾಮುಖಿಯಾದ ಉಭಯ ನಾಯಕರು ನಗುನಗುತ್ತಲೇ ಮುಡಾ ಪ್ರಕರಣದ ಕುರಿತು ಚರ್ಚೆ ಮಾಡಿಕೊಂಡಿದ್ದಾರೆ. ಈ ವೇಳೆ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಾತನಾಡಿ, ಸಿದ್ದರಾಮಣ್ಣ ಹಾಗೂ ನನ್ನ ನಡುವೆ ಯಾವುದೇ ಮುಚ್ಚು ಮರೆಯಿಲ್ಲ. ನಂದು ಏನಿದ್ದರೂ ನೇರ ಮಾತುಕತೆ. ಬೇರೆಯವರಿಗೆ ಹೆದರಿಸುವ ಹಾಗೇ ಹಿಂದೊಂದು ಮುಂದೊಂದು ರೀತಿಯಲ್ಲಿ ಕುತಂತ್ರ ಮಾಡಿದವನಲ್ಲ. ಅದರ ಬಗ್ಗೆಯೂ ನನಗೆ ತಿಳಿದಿಲ್ಲ. ಸಿದ್ದರಾಮಯ್ಯ ಅವರು ನನ್ನ ಮಾತು ಕೇಳಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಮುಡಾದ ಕೇವಲ 14 ನಿವೇಶನಗಳಿಗಾಗಿ ಇಷ್ಟೆಲ್ಲಾ ಆಗುತ್ತಿದೆ. ಅಂದೇ ನನ್ನ ಮಾತು ಕೇಳಿ ನಿವೇಶನಗಳನ್ನು ಹಿಂದಿರುಗಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

ಬಳಿಕ ಸೋಮಣ್ಣನವರ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅದು ಆಗಲ್ಲ ಕೇಳಯ್ಯಾ ಇಲ್ಲಿ. ಭೂ ಸುಧಾರಣೆ ಕಾಯ್ದೆ ಇದ್ದಂತೆ ಪ್ರಕ್ರಿಯೆ ಮಾಡಲಾಗಿದೆ. ಆದರೆ ಈ ಪ್ರಕರಣದಲ್ಲಿ ನನ್ನದಂತೂ ಏನೂ ತಪ್ಪಿಲ್ಲ. ಸುಮ್ಮನೆ ಗೊತ್ತಿಲ್ಲದೇ ಏನೇನೋ ಮಾತನಾಡಬೇಡ ಎಂದು ಅಪಹಾಸ್ಯ ಮಾಡಿದರು.

 

Tags: