Mysore
24
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು: ಮೂವರು ಮೃತ್ಯು

ಉತ್ತರ ಪ್ರದೇಶ: ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗೂಗಲ್ ಮ್ಯಾಪ್ ನಂಬಿ ಹೊರಟ ಕಾರೊಂದು ನಿರ್ಮಾಣ ಹಂತದ ಸೇತುವೆಯ ಮೇಲಿಂದ ನದಿಗೆ ಬಿದ್ದು ಮೂವರು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದು, ಭಾನುವಾರ ಬೆಳಿಗ್ಗೆ ವಿಚಾರ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ಮೃತಪಟ್ಟವರನ್ನು ವಿವೇಕ್ ಮತ್ತು ಅಮಿತ್ ಎನ್ನಲಾಗಿದ್ದು ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.

ವಿವೇಕ್ ಹಾಗೂ ಅಮಿತ್ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಲು ಶನಿವಾರ ಬಾಡಿಗೆ ಕಾರೊಂದನ್ನು ಗೊತ್ತುಪಡಿಸಿ ಗುರುಗ್ರಾಮದಿಂದ ಉತ್ತರಪ್ರದೇಶದ ಬರೇಲಿಗೆ ಹೊರಟಿದ್ದರು. ಈ ವೇಳೆ ಮಾರ್ಗ ಸರಿಯಾಗಿ ಗೊತ್ತಿರದ ಕಾರಣ ಚಾಲಕ ಗೂಗಲ್ ಮ್ಯಾಪ್ ಮೊರೆ ಹೋಗಿದ್ದು ಅದರಂತೆ ಬರೇಲಿ ಸಮೀಪದ ನಿರ್ಮಾಣ ಹಂತದ ಸೇತುವೆಯ ದಾರಿ ತೋರಿಸಿದೆ ಅದರಂತೆ ಕಾರು ಚಾಲಕ ಅದೇ ಮಾರ್ಗವನ್ನು ಅನುಸರಿಸಿಕೊಂಡು ಹೋಗಿದ್ದಾನೆ ಆದರೆ ಸೇತುವೆ ಅಪೂರ್ಣಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು ಐವತ್ತು ಅಡಿ ಆಳದ ರಾಮಗಂಗಾ ನದಿಗೆ ಬಿದ್ದಿದೆ ಅಷ್ಟೋತ್ತಿಗಾಗಲೇ ರಾತ್ರಿಯಾಗಿದ್ದ ಕಾರಣ ವಿಚಾರ ಯಾರಿಗೂ ಗೊತ್ತಾಗಿಲ್ಲ, ಮರುದಿನ ಭಾನುವಾರ ಬೆಳಿಗ್ಗೆ ಅಲ್ಲಿನ ಸ್ಥಳೀಯರು ನದಿಗೆ ಬಿದ್ದಿರುವ ಕಾರೊಂದನ್ನು ಗಮನಿಸಿದ್ದಾರೆ ಬಳಿಕ ಕಾರಿನ ಬಳಿ ತೆರಳಿದ್ದಾರೆ ಈ ವೇಳೆ ಕಾರಿನಲ್ಲಿ ಮೂವರು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬದೌನ್ ಪೊಲೀಸರು, ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Tags: