Mysore
18
few clouds

Social Media

ಸೋಮವಾರ, 26 ಜನವರಿ 2026
Light
Dark

ಫೆ.2ರಿಂದ ಬಜೆಟ್ ತಯಾರಿ : ಸಿಎಂ ಸಿದ್ದರಾಮಯ್ಯ

ಮೈಸೂರು : ಮುಂದಿನ ಬಜೆಟ್ ಮಂಡನೆಗೆ ಫೆ.2 ರಿಂದ ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ ತಯಾರಿ ಶುರು ಮಾಡಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಆರ್ಥಿಕ ಇಲಾಖೆ ಜೊತೆಗೆ ಚರ್ಚೆ ನಡೆಸಿದ್ದೇನೆ. ಯಾವ ರೀತಿ ಮಾಡಬೇಕೆಂದು ಹೇಳಿದ್ದೇನೆ. 2ರಿಂದ ಗಂಭೀರವಾಗಿ ಇಲಾಖಾವಾರು ಚರ್ಚೆ ನಡೆಸಲಿದ್ದೇನೆ ಎಂದರು.

ಪತ್ರ ವ್ಯವಹಾರ ನಡೆದಿಲ್ಲ ಎಂಬುದು ಸುಳ್ಳು : ಸಿಎಂ
ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ಗೆ ಕರ್ನಾಟಕದಿಂದ ಸ್ತಬ್ಧಚಿತ್ರ ಕಳುಹಿಸುವ ಬಗ್ಗೆ ಸರ್ಕಾರ ಪತ್ರವ್ಯವಹಾರ ಮಾಡಿದೆ. ಸಂಬಂಧಿಸಿದವರನ್ನು ಸಂಪರ್ಕ ಮಾಡಿದೆ. ಪತ್ರವ್ಯವಹಾರ ಮಾಡಿಲ್ಲ ಎಂಬುದು ಸುಳ್ಳ. ಪೆರೇಡ್‌ನಲ್ಲಿ ಪ್ರತಿ ರಾಜ್ಯದ ಸ್ತಬ್ದಚಿತ್ರಗಳು ಇರುವಂತೆ ಅವಕಾಶ ಮಾಡಿಕೊಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಪತ್ರವ್ಯವಹಾರ ಮಾಡದೆ ನಾವು ಸುಮ್ಮನಿರಲಿಲ್ಲ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಉತ್ತಮ ವಾತಾವರಣ
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣವಿದೆ. ದಾವೋಸ್‌ನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನೇಕ ಕಂಪನಿಗಳು ಬಂಡವಾಳ ಹೂಡಿಕೆಗೆ ಒಲವು ತೋರಿದ್ದಾರೆ. ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಉದ್ಯಮಿಗಳಿಗೆ ನಮ್ಮಲ್ಲಿರುವ ಅನುಕೂಲಗಳ ಬಗ್ಗೆ ಹೇಳಿದ್ದಾರೆ. ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ಉತ್ತಮ ವಾತಾವರಣ,ಅನುಕೂಲತೆ ಇದೆ ಎಂದರು. ಮಾನವ ಸಂಪನ್ಮೂಲ ಜಾಸ್ತಿ ಇದೆ. ಕೌಶಲ್ಯ ಹೊಂದಿದ ಮತ್ತು ಕೌಶಲರಹಿತ ಪದವೀಧರರು ಇದ್ದಾರೆ. ಸರ್ಕಾರದಿಂದಲೇ ಕೌಶಲತರಬೇತಿ ಕೊಡಿಸಿ ಉದ್ಯೋಗಕ್ಕೆ ತಯಾರು ಮಾಡುವುದರಿಂದ ಮಾನವ ಸಂಪನ್ಮೂಲದ ಕೊರತೆ ಇಲ್ಲ ಎಂದು ನುಡಿದರು.

ವರದಿ ಕೊಡಲಿ
ವಿಧಾನಮಂಡಲ ಜಂಟಿ ಅಧಿವೇಶದನಲ್ಲಿ ರಾಜ್ಯಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಬೇಕಾಗಿತ್ತು. 176ಎ ಮತ್ತು 163 ಸೆಲ್ ಪ್ರಕಾರ ಓದಬೇಕಿತ್ತು. ಆದರೆ,ರಾಜ್ಯಪಾಲರು ಓದಲಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದ ಸಿಎಂ, ರಾಷ್ಟ್ರಪತಿಗಳಿಗೆ ವರದಿ ಕೊಟ್ಟಿದ್ದಾರೆ. ಬೇಡಿ ಅನ್ನಲ್ಲ, ಕೊಡಲಿ. ಏನು ನಡೆದಿದೆ ಎಂದು ಹೇಳಿದ್ದಾರೆಯೇ ಹೊರತು ವರದಿಯಲ್ಲ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಮತ್ತಿತರರು ಹಾಜರಿದ್ದರು.

Tags:
error: Content is protected !!