Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

91ಕ್ಕೆ7 ನಂತರ 292 ರನ್‌!:ಭವಿಷ್ಯದಲ್ಲಿ ನನ್ನ ಮಕ್ಕಳಿಗೆ ಹೇಗೆ ವಿವರಿಸಲಿ:ಮ್ಯಾಕ್ಸ್ ವೆಲ್

ಮುಂಬೈ : ”ಆಸ್ಟ್ರೇಲಿಯ ಒಂದು ಹಂತದಲ್ಲಿ 91ಕ್ಕೆ 7 ವಿಕೆಟ್ ಕಳೆದುಕೊಂಡ ನಂತರ 292 ರನ್‌ಗಳನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಭವಿಷ್ಯದಲ್ಲಿ ನನ್ನ ಮಕ್ಕಳಿಗೆ ನಾನು ಹೇಗೆ ವಿವರಿಸಲಿ” ಎಂದು ಸ್ಮರಣೀಯ ದ್ವಿಶತಕ ಸಿಡಿಸಿ ಅಫ್ಘಾನ್ ವಿರುದ್ಧ ರೋಚಕ ಗೆಲುವಿಗೆ ಕಾರಣವಾದ ಗ್ಲೇನ್ ಮ್ಯಾಕ್ಸ್ ವೆಲ್ ಸಂತಸ ಹಂಚಿಕೊಂಡಿದ್ದಾರೆ.

ಪಂದ್ಯದ ನಂತರ ಪ್ರಸ್ತುತಿ ಸಮಾರಂಭದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮ್ಯಾಕ್ಸ್ ವೆಲ್ , ”ಇಂದಿನ ಪಾಲುದಾರಿಕೆಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ 68 ಎಸೆತಗಳಲ್ಲಿ 12 ರನ್ ಗಳಿಸಿದರು. ಅಕ್ಷರಶಃ ಬೆನ್ನಿನ ಮೇಲೆ ತಮ್ಮ ತಂಡದ ಭಾರವನ್ನು ಹೊತ್ತಿದ್ದರು ಎಂದರು.

ಇಂದು ಫೀಲ್ಡಿಂಗ್ ಮಾಡುವಾಗ ಹೆಚ್ಚಿನ ತಾಪದಲ್ಲಿ ಹೆಚ್ಚು ಕಸರತ್ತು ಮಾಡಿಲ್ಲ, ನನ್ನ ಕಾಲುಗಳ ನೋವಿನಿಂದ ಹಿಂದೆ ಉಳಿಯಲು ನಿರ್ಧರಿಸಿದ್ದೆ. 92 ಕ್ಕೆ 7 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಸಾಧ್ಯವಾದಷ್ಟು ಬ್ಯಾಟಿಂಗ್ ಗೆ ಅಂಟಿಕೊಳ್ಳಲು ಯೋಚಿಸಿದೆ.ಸಕಾರಾತ್ಮಕವಾಗಿ ನನ್ನ ಹೊಡೆತಗಳನ್ನು ಆಡಲು ನೋಡಿದೆ. ಎಲ್ಬಿಡಬ್ಲ್ಯೂ ಸ್ಟಂಪ್‌ಗಳಿಂದ ಸ್ವಲ್ಪ ಮೇಲಕ್ಕೆ ಹೋಗುತ್ತಿತ್ತು. ಬಹುಶಃ ಅದು ನನ್ನನ್ನು ಮುಂದುವರಿಯುವಂತೆ ಮಾಡಿತು ಎಂದರು.

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಪತ್ನಿ ಭಾರತ ಮೂಲದವರಾಗಿದ್ದು ಈ ವರ್ಷ ಗಂಡು ಮಗುವನ್ನು ಪಡೆದಿದ್ದು, ಪುತ್ರನಿಗೆ ಲೋಗನ್ ಮೇವರಿಕ್ ಮ್ಯಾಕ್ಸ್‌ವೆಲ್ ಎಂದು ಹೆಸರಿಸಿಟ್ಟಿದ್ದಾರೆ.

ಏಕದಿನ ಪಂದ್ಯದಲ್ಲಿ 7ನೇ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್‌ಗೆ ಅತ್ಯಧಿಕ ಜತೆಯಾಟ ಅಫ್ಘಾನ್ ವಿರುದ್ದದ ಪಂದ್ಯದಲ್ಲಿ ದಾಖಲಾಗಿದ್ದು (201*) ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ಜತೆಯಾಟವಾಗಿದೆ. ಪ್ಯಾಟ್ ಕಮ್ಮಿನ್ಸ್ (17.64 ) ಅವರು ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ ಕಡಿಮೆ ಸ್ಟ್ರೈಕ್-ರೇಟ್ (ಕನಿಷ್ಠ 10 ರನ್ ಸ್ಕೋರ್) ದಾಖಲಿಸಿದ್ದಾರೆ. ಜಿಂಬಾಬ್ವೆ ಯ ಜ್ಯಾಕ್ ಹೆರಾನ್ ಅವರು ವೆಸ್ಟ್ ಇಂಡೀಸ್ ವಿರುದ್ಧ 1983 ರಲ್ಲಿ ವೋರ್ಸೆಸ್ಟರ್ ನಲ್ಲಿ (16.43 ಸ್ಟ್ರೈಕ್-ರೇಟ್) ಹೊಂದಿದ್ದರು.

ಮ್ಯಾಕ್ಸ್ ವೆಲ್ 128 ಎಸೆತಗಳಿಂದ 201 ರನ್ ಬಾರಿಸಿ ವಿಶ್ವಕಪ್ ದ್ವಿಶತಕದ ಸಂಭ್ರಮ ಆಚರಿಸಿದರು. ಬರೋಬ್ಬರಿ 21 ಬೌಂಡರಿ ಮತ್ತು 10 ಆಕರ್ಷಕ ಸಿಕ್ಸರ್ ಬಾರಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ