Mysore
24
broken clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಉದ್ಯೋಗದ ಹೊಸ ಆಕಾಶ ಡಿಜಿಟಲ್ ಮಾರ್ಕೆಟಿಂಗ್

ಇಂದಿನ ಮಾಹಿತಿ-ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಗೆ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಇದೆ. ಇಂಟರ್‌ನೆಟ್ ಬಳಕೆಯಲ್ಲಿನ ಹೆಚ್ಚಳ ಮತ್ತು ಆನ್‌ಲೈನ್ ಶಾಪಿಂಗ್‌ಗೆ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದ ಬೆಳವಣಿಗೆ ಅಗಾಧವಾಗಿದೆ. ನಿರಂತರ ಕಲಿಕೆಯ ಜೊತೆಜೊತೆಗೆ ಉತ್ತಮ ಸಂಬಳವನ್ನೂ ನಿರೀಕ್ಷಿಸಬಹುದಾಗಿದೆ. ಹೀಗಾಗಿ ಡಿಜಿಟಲ್ ಮಾರ್ಕೆಟಿಂಗ್ ಯುವ ಜನರ ವೃತ್ತಿ ಜೀವನಕ್ಕೆ ಉತ್ತಮ ಆಯ್ಕೆಯಾಗಬಹುದು. ಆದರೆ, ಈ ಕ್ಷೇತ್ರದಲ್ಲಿನ ಹೊಸ ಪ್ರವೃತ್ತಿಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಹೊಂದಿಕೊಳ್ಳಬೇಕಾದದ್ದು ಬಹು ಮುಖ್ಯ.

ಡಿಜಿಟಲ್ ಮಾರ್ಕೆಟಿಂಗ್ ಎಂಬುದು ಕಂಪೆನಿಗಳು ಸಾಮಾಜಿಕ ಮಾಧ್ಯಮ, ಇ-ಮೇಲ್‌ಗಳು, ಬ್ಲಾಗ್‌ಗಳು ಮತ್ತು ಡಿಜಿಟಲ್ ಜಾಹೀರಾತುಗಳ ಮೂಲಕ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಚಾರ ಮಾಡುವ ಪ್ರಕ್ರಿಯೆಯಾಗಿದೆ. ಇದು ಆನ್‌ಲೈನ್‌ನಲ್ಲಿ ವ್ಯವಹರಿಸುವವರನ್ನು ನಿರ್ದಿಷ್ಟವಾಗಿ ತಲುಪಲು ಗುರಿಯಾಗಿಸಿಕೊಂಡ ಅಭಿಯಾನಗಳನ್ನು ನಡೆಸುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.

ಬ್ಯಾಂಕ್‌ಗಳ ಎಟಿಎಂಗಳು ಒಂದಕ್ಕಿಂತ ಒಂದು ಭಿನ್ನವಾಗಿರುವಂತೆ ಹೊಸ ಹೊಸ ಡಿಜಿಟಲ್ ಪ್ಲಾಟ್-ರ್ಮ್‌ಗಳು ಗೋಚರಿಸುತ್ತಿದ್ದಂತೆ ಅವುಗಳ ಬಳಕೆಯೂ ಭಿನ್ನವಾಗುತ್ತಾ ಹೋಗುತ್ತದೆ. ಜೊತೆಗೆ ಅವುಗಳ ಬಳಕೆಯೂ ಬದಲಾಗುತ್ತಾ ಹೋಗುತ್ತದೆ. ಡಿಜಿಟಲ್ ಪ್ಲಾಟ್-ರ್ಮ್‌ನ ಈ ಹೊಸ ಪ್ರವೃತ್ತಿಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅವು ಬ್ರ್ಯಾಂಡ್ ಆನ್‌ಲೈನ್ ಗುರುತಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನುತಿಳಿದುಕೊಳ್ಳುವುದೇಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್‌ನ ಕೆಲಸ.

ಗೂಗಲ್‌ನಂತಹ ಸರ್ಚ್ ಇಂಜಿನ್‌ಗಳು ಹೊಸತನ್ನು ಹೊತ್ತು ತಂದಾಗ ಮಾರ್ಕೆಟಿಂಗ್ ತಂಡವು ಅದಕ್ಕೆ ತಕ್ಕಂತೆ ಕಾರ್ಯತಂತ್ರವನ್ನು ರೂಪಿಸಬೇಕಾಗುತ್ತದೆ. ಈ ಕಾರಣದಿಂದ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಜೀವನವು ನಿತ್ಯ ಸವಾಲುಗಳನ್ನು ಒಡ್ಡುತ್ತಲೇ ಹೊಸತನವನ್ನು ಕಲಿಸುತ್ತಾ ಹೋಗುತ್ತದೆ. ಭಾರತದಂತಹ ದೇಶದಲ್ಲಿ ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆ ಇಂದಿಗೂ ಜೀವಂತವಾಗಿದ್ದರೂ, ನಗರ ಪ್ರದೇಶಗಳ ಜನರಷ್ಟೇ ಅಲ್ಲ,ಹಳ್ಳಿಗಾಡಿನ ಜನರು ಕೂಡ ಇಂದು ಆನ್‌ಲೈನ್ ಪ್ಲಾಟ್-ರ್ಮ್‌ಗಳಲ್ಲಿ ಸರಾಗವಾಗಿ ವ್ಯವಹರಿಸುವುದನ್ನು ಕಲಿತಿದ್ದಾರೆ.

ಹೀಗಾಗಿ ಡಿಜಿಟಲ್ ಮಾರ್ಕೆಟಿಂಗ್ ದಿನೇ ದಿನೇ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೆಚ್ಚಲಿದೆ ಬೇಡಿಕೆ: ಮುಂದಿನ ಮೂರು ವರ್ಷಗಳಲ್ಲಿ ಅಂದರೆ ೨೦೨೮ರ ವೇಳೆಗೆ ಡಿಜಿಟಲ್ ಮಾರ್ಕೆಟಿಂಗ್‌ನ ಗಾತ್ರವು ೨೪.೧ ಬಿಲಿಯನ್ ತಲುಪಲಿದ್ದು, ಶೇ.೩೨ರ ದರದಲ್ಲಿ ಬೆಳೆಯಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ೨೦೨೭ರ ವೇಳೆಗೆ ಸುಮಾರು ಆರು ಬಿಲಿಯನ್ ಜನರು ಇಂಟರ್‌ನೆಟ್ ಬಳಸಲಿದ್ದು, ಇದರಿಂದಾಗಿ ಕೌಶಲಭರಿತ ಡಿಜಿಟಲ್ ಮಾರಾಟಗಾರರ ಅಗತ್ಯ ಇನ್ನಷ್ಟು ಹೆಚ್ಚಲಿದೆ.

ಡಿಜಿಟಲ್ ಮಾರ್ಕೆಟಿಂಗ್‌ನ ಪಾತ್ರಗಳು: ಡಿಜಿಟಲ್ ಮಾರ್ಕೆಟಿಂಗ್, ಇ-ಮೇಲ್ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್, ಕಾಪಿ ರೈಟಿಂಗ್, ವಿಷಯ ಬರವಣಿಗೆ, ಸಾಮಾಜಿಕ ಮಾಧ್ಯಮಗಳ ನಿರ್ವಹಣೆ, ಡಿಜಿಟಲ್ ಜಾಹೀರಾತು ಮತ್ತು ಸರ್ಚ್ ಇಂಜಿನ್ ಮಾರ್ಕೆಟಿಂಗ್‌ನಂತಹ ವಿವಿಧ ಕೆಲಸಗಳನ್ನು ಈ ಕ್ಷೇತ್ರವು ಒಳಗೊಂಡಿರುತ್ತದೆ. ಪ್ರತಿಯೊಂದು ವೃತ್ತಿಗೆ ವಿಭಿನ್ನ ಕೌಶಲಗಳು ಅಗತ್ಯವಿದೆ. ವೃತ್ತಿಯಲ್ಲಿನ ಪರಿಣತಿ, ವೃತ್ತಿ ಕೌಶಲ ಮತ್ತು ಕೆಲಸದ ಸ್ಥಳವನ್ನು ಈ ಕ್ಷೇತ್ರದಲ್ಲಿ ವೃತ್ತಿ ಮಾಡುವವರ ಸಂಬಳ ಅವಲಂಬಿಸಿರುತ್ತದೆ.

Tags:
error: Content is protected !!