ಬೆಂಗಳೂರು: ಭಾರತದ ಮೊದಲ ಹೈಪರ್‌ಲೂಪ್ ಸಾರಿಗೆ ಸೇವೆಯು ಟೆಸ್ಟ್ ಟ್ರ್ಯಾಕ್ ಪೂರ್ಣಗೊಂಡಿದೆ. ಈ ಮೂಲಕ ಹೈಪರ್‌ಲೂಪ್ ರೈಲು ಯೋಜನೆಗೆ ಮತ್ತಷ್ಟು ವೇಗ ಸಿಕ್ಕಿದೆ.
ಕೇಂದ್ರ ರೈಲ್ವೆ ಖಾತೆ ಸಚವ ಅಶ್ವಿನ್ ವೈಷ್ಣವ್ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ದೇಶದ ಮೊದಲ ಹೈಪರ್ ಲೂಪ್ ರೈಲಿನ ಟೆಸ್ಟ್ ಟ್ರ್ಯಾಕ್ ಪೂರ್ಣಗೊಂಡಿದೆ. ಯಶಸ್ವಿಯಾಗಿ ಈ ಟ್ರ್ಯಾಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮದ್ರಾಸ್ ಐಐಟಿಯ ಆವಿಷ್ಕಾರ ಹೈಪರ್‌ಲೂಪ್ ಟೀಂ ಮತ್ತು TuTr ಎಂಬ ಸ್ಪಾರ್ಟ್‌ಅಪ್ ಭಾರತೀಯ ರೈಲ್ವೆಯ ಮುಂದಾಳತ್ವದಲ್ಲಿ ಹೈಪರ್‌ಲೂಪ್ ಸಾರಿಗೆ ಸೇವೆ ಪರಿಚಯಿಸು ಹೊಣೆ ಹೊತ್ತುಕೊಂಡಿದೆ.
ಐಐಟಿ ಕ್ಯಾಂಪಸ್‌ನಲ್ಲಿ 410ಮೀಟರ್ ಉದ್ದದ ಹೈಪರ್‌ಲೂಪ್ ಟೆಸ್ಟ್ ಟ್ಯ್ರಾಕ್ ಅನ್ನು ಯಶಸ್ವಿಯಾಗಿ ನಿರ್ಮಿಹಿಸಿದೆ ಈ ತಂಡ.
ಹೈಪರ್‌ಲೂಪ್ ಎಂಬುದು ಹಳಿಯನ್ನು ಆಧಾರವಾಗಿಟ್ಟುಕೊಂಡು ನಿರ್ವಾತ ಕೊಳವೆಗಳಿಂದ ನಿರ್ಮಿಸಿದ ಒಂದು ಸಾರಿಗೆ ಮಾರ್ಗ. ಇದರ ಕ್ಯಾಬಿನ್ ಗಳಲ್ಲಿ 24 ರಿಂದ 28 ಜನ ಕೂತು ಗಂಟೆಗೆ ಗರಿಷ್ಠ 1,100 ಕಿ.ಮೀ ವೇಗದಲ್ಲಿ ಪ್ರಯಾಣಿಸಬಹುದು.
ಭಾರತದಲ್ಲಿ ಮುಂಬೈ-ಪುಣೆ ಮಾರ್ಗದಲ್ಲಿ ಹೈಪರ್‌ಲೂಪ್ ಆರಂಭಿಸುವ ಯೋಜನೆಯನ್ನು ಭಾರತೀಯ ರೈಲ್ವೆ ಹಾಕಿಕೊಂಡಿದೆ. ಈ ಮಾರ್ಗದಲ್ಲಿ ಈ ಯೋಜನೆ ಆರಂಭವಾದರೆ 150ಕಿ.ಮೀ ದೂರವನ್ನು ಕೇವಲ 25 ನಿಮಿಷದಲ್ಲಿ ಕ್ರಮಿಸಬಹುದು ಎನ್ನಲಾಗಿದೆ.