Mysore
28
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಇಲ್ಲಿದೆ ನೋಡಿ ನವೀನ ಇಯರ್‌ಬಡ್ಸ್‌

ನೂ ರಿಪಬ್ಲಿಕ್ ಕಂಪೆನಿಯು ಅತ್ಯುತ್ತಮ ಆಡಿಯೊ ಟೆಕ್ನಾಲಜಿ ಮತ್ತು ನೋಡಲು ಆಕರ್ಷಕವಾಗಿರುವ ‘ಸೈಬರ್‌ಸ್ಟಡ್ ಎಕ್ಸ್?’ ಫೋ‌ಲಿಸ್ ಇಯರ್ ಬಡ್ ಗಳನ್ನು ಬಿಡುಗಡೆ ಮಾಡಿದೆ. ನಾಯ್ಸ್ ಕಾನ್ಸಲೇಷನ್, ಉತ್ತಮ ಅಡಿಯೊ, ಆರ್‌ಜೆಬಿ, ಎಲ್‌ಇಡಿ ಲೈಟ್ ಮತ್ತು ನಯವಾದ ವಿನ್ಯಾಸ ಹೊಂದಿರುವ ಈ ಇಯರ್ ಬಡ್ಸ್‌ ಅನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಮಾಡಿದರೆ 70 ಗಂಟೆಗಳ ಕಾಲ ಬಳಸಬಹುದಾಗಿದೆ.

ಅಲ್ಲದೆ ಟಚ್ ಮೂಲಕ ಸುಲಭವಾಗಿ ಆಡಿಯೋ, ಕರೆಗಳು ಮತ್ತು ಮೋಡ್‌ಗಳನ್ನು ನಿಯಂತ್ರಿಸಬಹುದು. ನು ರಿಪಬ್ಲಿಕ್ ವೆಬ್‌ಸೈಟ್‌ನಲ್ಲಿ ಈ ಇಯ‌ರ್‌ ಬಡ್ಸ್‌ 1,799 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಗೇಮ್ಸ್, ವರ್ಕೌಟ್, ಗೇಮಿಂಗ್ ಮ್ಯಾರಥಾನ್ ಸೇರಿದಂತೆ ದೈನಂದಿನ ಕೆಲಸದ ವೇಳೆಯಲ್ಲಿ ಈ ಇಯರ್‌ಬಡ್ಸ್‌ಗಳನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದೆ.

Tags: