ಪ್ರೊ.ಆರ್.ಎಂ.ಚಿಂತಾಮಣಿ ನಾವು ಭಾರತೀಯರು ಅನೇಕ ಸಂದರ್ಭಗಳಲ್ಲಿ ಅನೇಕ ವಿಷಯಗಳಲ್ಲಿ ಗುರಿಯನ್ನು ಬಿಟ್ಟು ಬರಿ ಮಾರ್ಗವನ್ನೇ ಹಿಡಿದುಕೊಂಡು ಎಳೆದಾಡುತ್ತಿರುತ್ತೇವೆ. ಮುಖ್ಯ ಉದ್ದೇಶಗಳನ್ನೇ ಮರೆತು ಸಾಧನೆಗಳಿಗೆ ಜೋತುಬಿದ್ದಿರುತ್ತೇವೆ. ಮೂಲ ದೇವರನ್ನೇ ಗಮನಿಸದೆ ಪೂಜಾರಿ ಮಾಡಿದ ಅಲಂಕಾರಗಳನ್ನೇ ಹೊಗಳುತ್ತಾ ದೇವಸ್ಥಾನಗಳಲ್ಲಿ ಅಡ್ಡಬಿದ್ದು ‘ದರ್ಶನವಾಯಿತು’ ಎಂದು ಬೀಗುತ್ತೇವೆ. …