ಮೈಸೂರು: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಮುಂದುವರಿದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಬೋಚಿಕಟ್ಟೆ, ಶಾಂತಿಪುರ, ಜಾಕಹಳ್ಳಿ ಗ್ರಾಮಗಳಲ್ಲಿ ಪದೇ ಪದೇ ಹುಲಿ ಗೋಚರಿಸುತ್ತಿದೆ. ಕೂಂಬಿಂಗ್ ಕಾರ್ಯಾಚರಣೆ ವೇಳೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಜಾಕಹಳ್ಳಿ ಗ್ರಾಮದಲ್ಲಿ ಹುಲಿ ಮರಿ ಕಾಣಿಸಿಕೊಂಡಿದೆ. …





