ಕೊಡಗು: ಮಾದಾಪುರ ಅರಣ್ಯ ವಲಯದ ಕಾಜೂರಿನಲ್ಲಿ ಸಾರ್ವಜನಿಕರಿಗೆ, ಸ್ಥಳೀಯ ನಿವಾಸಿಗಳಿಗೆ, ವಾಹನ ಸವಾರರಿಗೆ ಭಯಭೀತಿ ಹುಟ್ಟಿಸಿದ್ದ ಕಾಜೂರು ಕರ್ಣ ಎಂದೇ ಖ್ಯಾತಿ ಪಡೆದಿದ್ದ ಕಾಡಾನೆಯನ್ನು ಇಂದು ಅರಣ್ಯ ಇಲಾಖೆಯವರು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಮಾದಾಪುರ ಅರಣ್ಯ ವಲಯದ ಕಾಜೂರಿ ನಲ್ಲಿ ಸಾರ್ವಜನಿಕರಿಗೆ, ಸ್ಥಳೀಯ ನಿವಾಸಿಗಳಿಗೆ, ವಾಹನ ಸವಾರರಿಗೆ ಭಯಭೀತಿ ಹುಟ್ಟಿಸಿದ್ದ ಕಾಜೂರು ಕರ್ಣ ಎಂದೇ ಖ್ಯಾತಿ ಪಡೆದಿದ್ದ ಅಂದಾಜು 40 ವರ್ಷ ಪ್ರಾಯದ ಆನೆಯನ್ನು ಇಂದು ಅರಣ್ಯ ಇಲಾಖೆಯವರು ಯಶಸ್ವಿಯಾಗಿ ಸೆರೆಹಿಡಿದರು. ಈ ಹಿನ್ನೆಲೆಯಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದರು.