ಚಪ್ಪಾಳೆ ಮತ್ತು ಪ್ರಶಸ್ತಿಗಳು ಕಲಾವಿದರಿಗೆ ಶಕ್ತಿವರ್ಧಕ ಟಾನಿಕ್ ಇದ್ದಂತೆ. ಬಹಳಷ್ಟು ಸಂದರ್ಭಗಳಲ್ಲಿ ಯಾರು ಚಪ್ಪಾಳೆ ತಟ್ಟುತ್ತಾರೆ, ಯಾರು ಪ್ರಶಸ್ತಿ ನೀಡುತ್ತಾರೆ ಎನ್ನುವುದು ಮುಖ್ಯವಾಗುವುದಿಲ್ಲ. ಅವು ಬಂತು ಎನ್ನುವುದಷ್ಟೇ ಮುಖ್ಯ. ಇತ್ತೀಚೆಗಂತೂ ಚಿತ್ರರಂಗದಲ್ಲಿ ಹಲವು ಖಾಸಗಿ ಸಂಸ್ಥೆಗಳ ಪ್ರಶಸ್ತಿಗಳು. ಅವುಗಳಿಗೆ ‘ಅಂತಾರಾಷ್ಟ್ರೀಯ’ ಎನ್ನುವ …





