ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಯುವ ಸಂಭ್ರಮ ಕಾರ್ಯಕ್ರಮವು ಅನೇಕ ತೊಡಕುಗಳಿಂದ ಕೂಡಿದ್ದು, ವ್ಯವಸ್ಥಿತವಾಗಿ ಆಯೋಜನೆಗೊಂಡಿರಲಿಲ್ಲ ಎಂದೆನಿಸಿತು. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನೃತ್ಯ ತಂಡಗಳ ಆಯ್ಕೆಯಲ್ಲಿಯೂ ಯಾವುದೇ ಮಾನದಂಡಗಳಿರಲಿಲ್ಲ. ಇದರಿಂದಾಗಿ ಸಾಕಷ್ಟು ನೃತ್ಯಗಳು ಪುನರಾವರ್ತನೆಯಾದವು, ಅಲ್ಲದೆ ಭಾಗವಹಿಸುವ ತಂಡಗಳ …









