Mysore
35
scattered clouds

Social Media

ಗುರುವಾರ, 24 ಏಪ್ರಿಲ 2025
Light
Dark

ಹಾಡು ಪಾಡು

Homeಹಾಡು ಪಾಡು

ಅಬ್ದುಲ್ ರಶೀದ್ mysoorininda@gmail.com ಅವಳು ಕೈಯಲ್ಲಿನ ಚೀಲವನ್ನು ಮಗುವಂತೆ ಎತ್ತಿಕೊಂಡು ಮೈಸೂರು ಸಬರ್ಬನ್ ಬಸ್ಸು ನಿಲ್ದಾಣದಲ್ಲಿ ಬೆಳಗೆ ಇಳಿದವಳೇ ಆಟೋದವನಲ್ಲಿ ‘ಚಂದವಳ್ಳಿ ಕೆರೆ’ ಎಂದಳು. ಸಣ್ಣ ಪ್ರಾಯದ ಆಟೋ ಡ್ರೈವರ್ ಮುಖ ಚೂಪು ಮಾಡಿಕೊಂಡು ‘ಅದೆಲ್ಲಿ’ ಎಂಬಂತೆ ಇವಳ ಮುಖ ನೋಡಿದ. …

ಬಂತಲ್ಲಾ ನಮ್ಮ ಆನೆ! ಅಂಬಾರಿ ಹೊತ್ತ ನಮ್ಮ ದೊಡ್ಡ ಆನೆ. ಅಲಂಕಾರಗೊಂಡ ರಾಜವೈಭವದ ಆನೆ. ಗಂಭೀರ ನಡಿಗೆಯ ಆನೆ. ಅಂಬಾರಿಯೊಳಗೆ ಏನಿದೆಯೋ... ಅದಕ್ಕಿಂತ ಮೊದಲು ನನ್ನ ಕಣ್ಣು ಹೊರಳಿದ್ದು ಮಾವುತನ ಮೇಲೆ. ವೇಷಪಲ್ಲಟಗೊಂಡ ನಮ್ಮ ಅಣ್ಣಯ್ಯನೇ ಆ ಮಾವುತ. ಗಂಟಲು ಕಟ್ಟಿ …

ಬಹುತೇಕ ಎಲ್ಲಾ ಮಕ್ಕಳಂತೆ ನನ್ನ ಮಗನಿಗೂ ಸಣ್ಣವನಿದ್ದಾಗ ರಾತ್ರಿ ಮಲಗುವ ಮುನ್ನ ಒಂದು ಕತೆ ಹೇಳಲೇಬೇಕಿತ್ತು. ಅತ್ಯಂತ ಬೋರಿಂಗ್ ಎನಿಸುವ ಈ ದಿನಚರಿಯನ್ನು, ಬೇರೆ ದಾರಿಯಿಲ್ಲದೆ ಒಂದೆರಡು ವರ್ಷ ನಡೆಸಿಕೊಂಡು ಬಂದರೂ, ಅವನು ಕೊಂಚ ದೊಡ್ಡವನಾದ ಕೂಡಲೇ ದಿನಕ್ಕೊಂದು ಹೊಸ ಕತೆ …

ಕಣ್ಣ ಮರೆಯಾದ ಅರಮನೆಯ ಸಾಕಮ್ಮ  ಯಾರಾದರೂ ಬದುಕಿರುವಾಗ ‘ಹೇ ಅದೇನು ಬಿಡು!’ ಅಂದುಕೊಂಡು ಗಮನಿಸದೆ ಇರುವ ಸಂಗತಿಗಳೆಲ್ಲ ಅವರು ಸತ್ತ ಮರುಕ್ಷಣದಿಂದ ಬಹಳ ಮುಖ್ಯ ಅನಿಸುತ್ತವೆ. ಅವರು ಬದುಕಿದ್ದಾಗ ಕಾಣದ ಅರ್ಥಗಳೆಲ್ಲ ಕಾಣುವುದಕ್ಕೆ ಶುರುವಾಗುತ್ತವೆ. ಮೊನ್ನೆ ಮೊನ್ನೆ ತೀರಿಕೊಂಡರಲ್ಲ ರಾಣಿ ಎರಡನೆಯ ಎಲಿಸಬೆತ್ತು …

  ಡಿಗ್ರಿ ಓದುವ ಸಮಯ ಮತ್ತು ಡಿಎಸ್‌ಎಸ್‌ನ ಚಳವಳಿಯ ಕಾವು ನನಗಿತ್ತು. ನಮ್ಮೂರು ಮಳವಳ್ಳಿ. ತಾಲ್ಲೂಕು ಕೇಂದ್ರ ಕೂಡ. ಸುತ್ತಮುತ್ತಲಿನ ಗ್ರಾಮದವರು ತಾಲ್ಲೂಕು ಕಚೇರಿಗೆ ಬರುತ್ತಿದ್ದರು. ಹಾಗೆ ಬಂದವರು ಟೀ-ಕಾಫಿ ಅಂಗಡಿಗೆ ಬಂದು ‘‘ಸ್ವಾಮಿ ಅಪ್ಪ’’ ಎನ್ನುತ್ತ ಜಾತಿ ಪ್ರಮಾಣಪತ್ರ, ಪೊಲೀಸ್ …

  ನನ್ನ ಕೈನಲ್ಲಿ ಮೊಬೈಲ್, ಕ್ಯಾಮೆರಾ ಬರುವ ಹೊತ್ತಿಗೆ, ದೊಡ್ಡಿಗಾಗಿ ಕಾಡಿಗೆ ಹೋಗುವುದೇ ನಿಂತು ಹೋಯಿತು. ಗೋವಿನ ಕತೆಯಲ್ಲಿ ಬರುವ ಗೊಲ್ಲಗೌಡನ ದೊಡ್ಡಿಯ ಸಾಲುಗಳನ್ನು ಕೇಳಿದರೆ ಈವತ್ತಿಗೂ ನನಗೆ ಕರುಳು ಕಿವುಚಿದಂತಾಗುತ್ತದೆ. ಮತ್ತೊಮ್ಮೆ ದೊಡ್ಡಿ ಜೀವನವನ್ನು ಅನುಭವಿಸಬೇಕೆಂಬ ನನ್ನ ಕನಸು ಕನಸಾಗಿೆುೀಂ ಉಳಿದುಬಿಟ್ಟಿದೆ. …

  ರಷ್ದೀಯವರ ಮೇಲೆ ನಡೆದ ಹಲ್ಲೆಯನ್ನು, ಭಾರತೀಯರಾದ ನಾವು, ಲೆಬನಾನ್ ಸಂಜಾತ ಅಮೆರಿಕನ್ ಮುಸ್ಲಿಂ ತರುಣನೊಬ್ಬ ಇರಾನಿನ ಖೋಮೇನಿ ಫತ್ವಾದಿಂದ ಪ್ರೇರಿತನಾಗಿ ನಡೆಸಿದ ಹಲ್ಲೆ ಎಂದಷ್ಟೇ ಸೀಮಿತವಾಗಿ ನೋಡಿ ಪಕ್ಕಕ್ಕಿಡಬಹುದು. ಆದರೆ, ಅದನ್ನು, ಗೌರಿ ಲಂಕೇಶ್, ಕಲ್ಬುರ್ಗಿಯಂತಹವರ ಹತ್ಯೆಯ ವಿಸ್ತಾರದಲ್ಲೂ ನೋಡಬೇಕಿದೆ. ‘‘ಗೌರಿ, …

ಸಂಜೆ ಆವರಿಸಿಕೊಳ್ಳತೊಡಗಿತ್ತು. ಸುಧೀರನ ಬೈಕು ಅವನಿಗೆ ತಿಳಿಯದಂತೆ ನಿಧಾನಕ್ಕೆ ಅಪ್ಪ ಕರೆದುಕೊಂಡು ಹೋಗುತ್ತಿದ್ದ ಆ ನದಿ ದಂಡೆಯ ಕಡೆಗೆ ಚಲಿಸತೊಡಗಿತು. ಅಪ್ಪ ಬಂದಾಗಲೆಲ್ಲ ಹಸಿರಾಗಿರುತ್ತಿದ್ದ ಗುಡ್ಡಗಳು ಇಂದು ಒಣಗಿ ನಿಂತಿದ್ದವು. ನದಿಯಲ್ಲಿ ಬೊಗಸೆಯಷ್ಟು ನೀರು ಬಿಟ್ಟು ಉಳಿದೆಲ್ಲವು ಬಿರುಕುಗೊಂಡಿತ್ತು. ಮುಳುಗುತ್ತಿದ್ದ ಸೂರ್ಯನೆದೆಯ …

ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿಯೂ ಪದ್ಮಾಸನದಲ್ಲಿ ಕುಳಿತು ಮೂರು ಗಂಟೆಗಳ ಕಾಲ ವೀಣೆ ಮೀಟಬಲ್ಲ ಮೈಸೂರಿನ ಡಾ.ಆರ್.ವಿಶ್ವೇಶ್ವರನ್ ಅವರ ಈ ವೀಣೆಗೆ ಈಗ ಎಪ್ಪತ್ತು ವರ್ಷ ವಯಸ್ಸು. ಮೈಸೂರಿನ ರಾಮಾನುಜ ರಸ್ತೆಯ ಕ್ರಾಸೊಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದ ವೀಣಾ ಮಾಂತ್ರಿಕ ರುದ್ರಪ್ಪನವರು ಯುವಕ ವಿಶ್ವೇಶ್ವರನ್ …

Stay Connected​