Mysore
25
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ತರೀಕೆರೆ ಏರಿಮೇಲೆ

Homeತರೀಕೆರೆ ಏರಿಮೇಲೆ

 - ರಹಮತ್ ತರೀಕೆರೆ ತೋಟದ ಕಾವಲಿನ ಹನುಮಂತಾ ಬೋವಿಯ ಕತೆಗಳನ್ನು ಸಂಗ್ರಹಿಸಿ ಎಕ್ಸೈಜ್‌  ಪುಸ್ತಕದಲ್ಲಿ ಬರೆದಿಡತೊಡಗಿದೆ ಬಹುತೇಕ ಲೇಖಕರಂತೆ ನನ್ನ ಬರೆಹದ ಬದುಕೂ ಕವನಗಳಿಂದ ಆರಂಭವಾಯಿತು. ಪಿಯಿಸಿಯಲ್ಲಿದ್ದೆ. ಕೃತಕವಾಗಿ ಪ್ರಾಸ ಜೋಡಿಸಿದ ಕವನಗಳನ್ನು ಊದುಬತ್ತಿಗಳಂತೆ ಹೊಸೆಯುತ್ತಿದ್ದೆ. ಪತ್ರಿಕೆ ಯಾವುದಾದರೂ ಸರಿ ಪ್ರಕಟವಾಗಬೇಕು …

ತೆಂಕುದಿಕ್ಕಿಗೆ ಶೋಲಾಕಾಡಿನ ಪರ್ವತಸೀಮೆ, ಜಿರ್ರೆಂದು ಸುರಿವ ಮಳೆ, ಗಡಗಡಿಸುವ ಥಂಡಿ, ಕಂಗೆಡಿಸುವ ಮಂಜು, ಹೆಗ್ಗಾಡು ಎಸ್ಟೇಟುಗಳಲ್ಲಿ ಕಿತ್ತಳೆ, ಕಾಫಿ, ಏಲಕ್ಕಿ, ಕರಿಮೆಣಸಿನ ಬೆಳೆ; ಆನೆ, ಕಾಡುಕೋಣ, ಕಡವೆ, ಹುಲಿ; ಬಡಗ ದಿಸೆಯಲ್ಲಿ ಚನ್ನಗಿರಿ ಕಡೆಯಿಂದ ಬಂದಿರುವ ತೆಳ್ಳನೆಯ ಕಾಡಿನ ಸಣ್ಣಬೆಟ್ಟಗಳ ಸಾಲು; …

- ರಹಮತ್ ತರೀಕೆರೆ ನಾನು ಮೈಸೂರಿಗೆ ಎಂಎ ಓದಲು ಹೋದಾಗ, ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಾಮಾ ನಾಯಕ, ಶಂಕರ ಮೊಕಾಶಿ ಪುಣೇಕರ, ಪ್ರಭುಶಂಕರ, ವೆಂಕಟಾಚಲ ಶಾಸ್ತ್ರಿ, ಜಿ. ಎಚ್.ನಾಯಕ, ಸಿಪಿಕೆ, ಎಚ್.ಎಂ. ಚನ್ನಯ್ಯ, ರಾಗೌ, ಸುಧಾಕರ ಮೊದಲಾದವರೆಲ್ಲ ವಿರಾಜಮಾನರಾಗಿದ್ದರು. ಇವರಿಗೆ ಹೋಲಿಸಿದರೆ …

- ರಹಮತ್ ತರೀಕೆರೆ ಹಳ್ಳಿಗಾಡಿನಿಂದ ಬರುತ್ತಿದ್ದ ವಿದ್ಯಾರ್ಥಿಗಳನ್ನು ದಡ್ಡರೆಂದು ಘೋಷಿಸಲು ಸದಾ ಹೊಂಚಿಕೊಂಡು ಕಾಯುತ್ತಿದ್ದ ಇಂಗ್ಲೀಶಿನ ಭಯೋತ್ಪಾದನೆಯಿಂದ ನಮ್ಮನ್ನು ಪಾರುಮಾಡಿದವರು ಈಶ್ವರಮೂರ್ತಿ!  ನನ್ನಲ್ಲಿ ಸಾಹಿತ್ಯಾಸಕ್ತಿಯನ್ನು ಮೊದಲು ಮೊಳೆಸಿದವರು ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದ ಧ್ರುವಕುರ್ಮಾ. ಅವರು ಚೆನ್ನಾಗಿ ಪಾಠ ಹೇಳುತ್ತಿದ್ದರು. ಕನ್ನಡ ವಿಷಯದಲ್ಲಿ …

ರಹಮ್ಮತ್‌ ತರೀಕೆರೆ ಎಷ್ಟೊಂದು ಜನರ ದುಡಿಮೆಯಿಂದ ನಮ್ಮ ಬದುಕು! ಈ ಖಬರಿದ್ದರೆ ನಮ್ಮ ಕಾಲು ಸದಾ ನೆಲದ ಮೇಲಿರುತ್ತದೆ! ಸಿಕ್ಕಲ್ಲಿ ದುಡಿಯಲು ಹೋಗುತ್ತಿದ್ದ ನಾವು ನಮ್ಮ ಕುಲುಮೆಯ ದೆಸೆಯಿಂದ ಸಣ್ಣಮಟ್ಟದ ಮಾಲಕರೂ ಆಗಿದ್ದೆವು. ಕುಲುಮೆಯಲ್ಲಿ ಸದಾ ಐದಾರು ಕೆಲಸಗಾರರು ಇರುತ್ತಿದ್ದರು. ಅಪ್ಪನಿಗೆ …

ನೋಡನೋಡುತ್ತಿದ್ದಂತೆ, ನಮ್ಮೂರಿನಲ್ಲಿ ಜನ ಸಿರಿವಂತರಾದರು. ಮಸೀದಿ ಬಂದಿತು. ನಮಾಜು ಸಂಸ್ಕೃತಿ ನೆಲೆನಿಂತಿತು. ಮೊಹರಂ ಮತ್ತು ಸೂಫಿಸಂತರ ಆಚರಣೆಗಳು ಬತ್ತಿಹೋದವು. ಮೊಹರಂ ಕಲಾವಿದರು ಹಾಗೂ ಸೂಫಿ ಸಂತರನ್ನು ಮೈಮೇಲೆ ಆವಾಹನೆ ಮಾಡಿಕೊಳ್ಳುತ್ತಿದ್ದವರೂ ಒಬ್ಬೊಬ್ಬರಾಗಿ ಲೋಕಕ್ಕೆ ಅಲಬಿದಾ ಹೇಳಿದರು. ಈಗ ಬಂದಿರುವ ಹೊಸತಲೆಮಾರಿಗೆ ಈ …

ಬೆಳಬೆಳಗ್ಗೆ ನಾನು ಹಿತ್ತಲಲ್ಲಿ ಹಾಕಿಕೊಂಡಿದ್ದ ಗುಡಿಸಲ ಮಂಚಿಕೆಯಲ್ಲಿ ಓದಿಕೊಂಡು ಕೂತಿದ್ದೆ. ಪ್ರಥಮ ಪಿಯುಸಿ ಪರೀಕ್ಷೆ ಶುರುವಾಗಲಿದ್ದವು. ಚಿಕ್ಕಕ್ಕ ಗಾಬರಿಯಿಂದ ಓಡಿ ಬಂದವಳೇ ‘ಅಮ್ಮನಿಗೆ ಬಾಯಿ ತೆಗೆಯಲು ಆಗುತ್ತಿಲ್ಲ. ದವಡೆ ಬಿಗಿಯುತ್ತಿವೆ ಅಂತಿದಾಳೆ. ಓಡು, ಅಪ್ಪನ್ನ ಕರಕೊಂಡು ಬಾ’ ಎಂದು ಕೂಗಿಕೊಂಡಳು. ನಾನು …

ನಮ್ಮ ಬಂಧುಗಳಲ್ಲಿ ಜನಪ್ರಿಯತೆಯನ್ನೂ ಅಪಖ್ಯಾತಿಯನ್ನೂ ಸಮಸಮವಾಗಿ ಗಳಿಸಿದವರೆಂದರೆ, ನಮ್ಮ ದೊಡ್ಡಭಾವ. ಅವರದು ಅಡಿಕೆ ಹೊಗೆಸೊಪ್ಪು ವ್ಯಾಪಾರದ ಮನೆತನ. ಅವರ ಅಣ್ಣಂದಿರೆಲ್ಲ ಸಿರಿವಂತ ಮನೆಗಳಲ್ಲಿ ಲಗ್ನವಾದವರು. ಈ ಅಣ್ಣಂದಿರು ಕಿರಿಯರಾದ ಭಾವನವರಿಗೆ ಅವಕಾಶ ಸಿಕ್ಕಾಗಲೆಲ್ಲ ‘ಹೋಗಿಹೋಗಿ ಬಡವರ ಮನೆಯಲ್ಲಿ ಮದುವೆಯಾದೆಯಲ್ಲೊ. ಗುಡಿಸಲು ಮನೆಯವರು. …

ಅಳಿದರೂ ಜನರ ಸ್ಮೃತಿಯಲ್ಲಿ ಉಳಿವವರು ಯಾರು? ಮಾಮೂಲಿ ಬದುಕನ್ನು ನಡೆಸದವರು, ಯಾರೂ ತುಳಿಯದ ಹಾದಿಯಲ್ಲಿ ನಡೆದವರು, ವರ್ಣರಂಜಿತ ಬಾಳ್ವೆ ಮಾಡಿ ಸೋಲನ್ನು ಕಂಡವರು, ನಮ್ಮ ಬಾಳುವೆಯನ್ನೂ ತಮ್ಮ ಸೃಜನಶೀಲತೆ ರಸಿಕತೆಯಿಂದ ಚೆಲುವಾಗಿಸಿದವರು. ಇವರು ವಿಶ್ವವಿಖ್ಯಾತರೇ ಆಗಬೇಕಿಲ್ಲ. ನಮ್ಮ ಪರಿಸರದಲ್ಲೇ ಬೇಲಿ ಹೂಗಳಂತೆ …

ಹುಟ್ಟಿಬೆಳೆದ ಊರಲ್ಲಿ ಕಹಿಯಾದ ನೆನಪುಳ್ಳವರು ಪಟ್ಟಣಕ್ಕೆ ಬಂದರೆ, ಮರಳಿ ಊರತ್ತ ಮುಖ ಮಾಡುವುದಿಲ್ಲ. ನನ್ನಮ್ಮ ಅವರ ಪೈಕಿ ಒಬ್ಬಳು. ಆಕೆ ಮನೆಗೆ ಅಂಟಿಕೊಂಡಿದ್ದ ಪಾರಂಪೋಕ್ ಜಾಗದಲ್ಲಿ ಸೊಗಸಾದ ಹಿತ್ತಲನ್ನು ಮಾಡಿದ್ದಳು. ಆದರೆ ಐವತ್ತು ವರ್ಷ ಅನುಭೋಗದಲ್ಲಿದ್ದರೂ ಅದನ್ನು ಸಕ್ರಮಗೊಳಿಸಿ ದಾಖಲೆ ಇಟ್ಟುಕೊಳ್ಳಲಿಲ್ಲ. …

Stay Connected​