ಬೆಳಗಾವಿ : ನಾನು ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಲ್ಲ, ನಿಜವಾದ ವಿರೋಧ ಪಕ್ಷದ ನಾಯಕ ನಾನೇ ಎಂದು ವಿಧಾನಸಭೆ ಕಲಾಪದ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸದನದಲ್ಲಿ ಮಾತನಾಡಿದ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಬೇಕಾದಾಗ ಬರುವುದು ಬಿಡುವುದು ಅಲ್ಲ. ನಾವೇ ನಿಜವಾದ ನಿಷ್ಠಾವಂತ ಕಾರ್ಯಕರ್ತರು ನಾವೇ ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ಅಂದರೆ ನಾನೇ ಎಂದರು.
ಇದನ್ನೂ ಓದಿ: ಮೈಸೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಜಾಗೃತಿ ರಥಯಾತ್ರೆಗೆ ಚಾಲನೆ
ನಾನು ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಲ್ಲ. ನಾನು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನಾನು ಮುಖ್ಯಮಂತ್ರಿಗಳ ಕಚೇರಿಗೆ ಹೋಗಿಲ್ಲ ಯಾವ ಮಂತ್ರಿಗಳಿಗೆ ದಯಾಪರರಾಗಿ ಕೇಳಿಕೊಂಡಿಲ್ಲ. ಅದಕ್ಕಾಗಿ ನಾನೇ ವಿರೋಧ ಪಕ್ಷದ ನಾಯಕ ಬೇಕಿದ್ದರೆ ಸ್ಪೀಕರ್ ಪಕ್ಕದಲ್ಲಿ ಒಂದು ಕುರ್ಚಿ ನನಗೆ ಅಲೋಟ್ಮೆಂಟ್ ಮಾಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.





