Mysore
22
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಯಡಿಯೂರಪ್ಪ ಜೈಲಿಗೆ ಹೋಗಿದ್ದು: ಶಾಸಕ ಯತ್ನಾಳ್‌

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಡಿದ ತಪ್ಪುಗಳಿಂದಲೇ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಜೈಲಿಗೆ ಹೋಗಿದ್ದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಇಂದು(ಜನವರಿ.19) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಮನೆಯಲ್ಲಿ ಕಿಚ್ಚಿತ್ತು ಕಿಮ್ಮತ್ತಿಲ್ಲ. ಅವರು ಮೊದಲು ಪುತ್ರ ವ್ಯಾಮೋಹವನ್ನು ಬಿಡಬೇಕು. ಏಕೆಂದರೆ ವಿಜಯೇಂದ್ರ ಅವರು ಹೊರಗಡೆ ಮಾತ್ರ ಪೂಜ್ಯ ತಂದೆ ಎನ್ನುತ್ತಾರೆ. ಆದರೆ ಮನೆಯಲ್ಲಿ ಯಡಿಯೂರಪ್ಪಗೆ ಮುದಿಯಾ ಎಂದು ಕರೆಯುತ್ತಾನೆ. ಯಡಿಯೂರಪ್ಪ ಅವರು ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನು ಮಣ್ಣಲ್ಲಿ ಇಟ್ಟಿದ್ದು, ಬಿ.ಬಿ.ಶಿವಪ್ಪ ಮತ್ತು ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವರಿಗೆ ಅನ್ಯಾಯ ಮಾಡಿದ್ದಾರೆ. ಈಗಲಾದರೂ ಅವರು ಸುಮ್ಮನೆ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂರಲಿ ಎಂದು ಲೇವಡಿ ಮಾಡಿದರು.

ಇನ್ನೂ ರಮೇಶ್‌ ಜಾರಕಿಕೊಳಿ ಅವರ ಪರ ನಾನು ಸದಾಕಾಲ ಇರುತ್ತೇನೆ. ಆದರೆ ನಮ್ಮ ವಿರುದ್ಧ ಎರಡು ಹಂದಿಗಳನ್ನು ಹೊರತು ಪಡಿಸಿ ಬೇರೆ ಯಾರೂ ಮಾತನಾಡಲ್ಲ. ಆ ಹಂದಿಗಳ ಹೇಳಿಕೆಗಳಿಗೆಲ್ಲಾ ನಾವು ತಲೆಕೆಡಿಸಿಕೊಳ್ಳಲು ಆಗುವುದಿಲ್ಲ. ಹೊಗಳು ಭಟ್ಟರು ವಿಜಯೇಂದ್ರ ಪರ ಮಾತನಾಡುತ್ತಾರೆ ಎಂದು ಟೀಕಿಸಿದರು.

ವಿಜಯೇಂದ್ರಗೆ ರಾಜ್ಯಾಧ್ಯಕ್ಷನಾಗಲು ಲಾಯಕ್ಕಿಲ್ಲ, ಅವರನ್ನು ನಾವ್ಯಾರು ರಾಜ್ಯಾಧ್ಯಕ್ಷನೆಂದು ಒಪ್ಪುವುದಿಲ್ಲ. ಅವನಿಂದಲೇ ಪಾಪ ಸುನೀಲ್‌ ಕುಮಾರ್‌ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ಅನ್ನಿಸುತ್ತದೆ. ಹೀಗಾಗಿ ರಮೇಶ್‌ ಜಾರಕಿಹೊಳಿ ಮಾತನಾಡಿರುವುದರಲ್ಲಿ ತಪ್ಪೇನಿಲ್ಲ. ಮೊದಲೇ ನಾವು ಉತ್ತರ ಕರ್ನಾಟಕದವರು ಆ ಕಾರಣಕ್ಕೆ ನಾವು ಯಾರಿಗೂ ಹೆದರಲ್ಲ ಎಂದು ಕಿಡಿಕಾರಿದರು.

Tags:
error: Content is protected !!