Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಬಿಜೆಪಿಯಲ್ಲಿ ಅಭ್ಯರ್ಥಿ ಇಲ್ಲದೇ ಯದುವೀರ್‌ ಅವರನ್ನು ಕಣಕ್ಕಿಳಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಅಭ್ಯರ್ಥಿ ಇಲ್ಲ ಅಂತಾನೇ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರನ್ನು ಕಣಕ್ಕಿಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮೈಸೂರು-ಕೊಡಗು ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್​ನಲ್ಲಿ ಹೆಚ್ಚು ಅಭ್ಯರ್ಥಿಗಳು ಇರುವುದರಿಂದ ಆಯ್ಕೆ ಕಗ್ಗಂಟಾಗಿದೆ. ಒಂದೊಂದು ಕಡೆ ಮೂರು ನಾಲ್ಕು ಜನ ಟಿಕೆಟ್​ ಆಕಾಂಕ್ಷಿಗಳಿದ್ದಾರೆ. ಬಿಜೆಪಿಯವರು ಮೈಸೂರಿನಲ್ಲಿ ಇರೋ ಅಭ್ಯರ್ಥಿ ಬದಲಾವಣೆ ಮಾಡಿದ್ದಾರೆ. ಆಗ ಇವರಿಗೆ ಕ್ಯಾಂಡಿಡೇಟ್ ಇದ್ರಾ?. ಯದುವೀರ್ ಅವರನ್ನು ಈಗ ಸ್ಪರ್ಧೆ ಮಾಡಿಸಿದ್ದಾರೆ ಎಂದರು.

ಮೈಸೂರಿನಲ್ಲಿ ಯಧುವೀರ್ ರಾಜ ಸ್ಪರ್ಧೆ ಎಂಬ ಪ್ರಶ್ನೆಗೆ ಯಾರು ರಾಜಾ ಎಂದು ಪ್ರಶ್ನಿಸಿ ಸಿದ್ದರಾಮಯ್ಯ, ಅವರು ಬಿಜೆಪಿ ಅಭ್ಯರ್ಥಿ ಬಿಡಪ್ಪ. ನನಗೆ ಮೈಸೂರು ಮಾತ್ರ ಅಲ್ಲ. ಇಡೀ ರಾಜ್ಯವೇ ಸ್ವಕ್ಷೇತ್ರ. ನಾನು ಓದಿದ್ದು ಮೈಸೂರಿನಲ್ಲಿ ಮಾತ್ರ. ಮೈಸೂರು ಜಿಲ್ಲೆಯ ಒಂದು ಹಳ್ಳಿಯವನು ಅಷ್ಟೇ. ಆದ್ರೆ 28 ಕ್ಷೇತ್ರಗಳೂ ನಮ್ಮವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮಾಜಿ ಸಿಎಂ ಡಿ.ವಿ ಸದಾನಂದ ಗೌಡರಿಗೆ ಕಾಂಗ್ರೆಸ್ ಸಂಪರ್ಕ ಮಾಡಿದೆ ಅನ್ನೋ ವಿಚಾರ ನನಗೆ ಗೊತ್ತಿಲ್ಲ. ನಾನು ಊಹಾಪೋಹದ ಪ್ರಶ್ನೆಗಳಿಗೆ ಉತ್ತರಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Tags: