Mysore
28
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ದರ್ಶನ್‌ ಮೇಲಿನ ಆರೋಪ ಸಾಬೀತಾದರೆ ಶಿಕ್ಷೆ ಏನು ?

ಬೆಂಗಳೂರು : ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣನದಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಅವರನ್ನು ಆರೋಪಿ ನಂ2 ಎಂದು ಪರಿಗಣಿಸಿ ಪೊಲೀಸರು ಬಂಧಿಸಿದ್ದಾರೆ.

ಬಂಧನದ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ನಂತರ ಇದೀಗ ದರ್ಶನ್‌ ಸೇರಿ 13ಮಂದಿ ಆರೋಪಿಗಳನ್ನು ಪೊಲೀಸ್‌ ಕಸ್ಟ್‌ಡಿಗೆ ನೀಡಲಾಗಿದೆ. ಒಂದು ವೇಳೆ ಈ ಪ್ರಕರಣದಲ್ಲಿ ದರ್ಶನ್‌ ಅಪರಾಧಿ ಎಂದು ಸಾಬೀತಾದರೇ ಶಿಕ್ಷೆ ಏನು ಎಂಬುದು ಎಲ್ಲರಲ್ಲೂ ಮೂಡಿರುವ ಪ್ರಶ್ನೆಯಾಗಿದೆ.

ಒಂದು ವೇಳೆ ನಟ ದರ್ಶನ್‌ ಈ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದರೆ, ಪ್ರಕರಣದಲ್ಲಿ ದರ್ಶನ್‌ ನೇರವಾಗಿ ಭಾಗಿಯಾಗಿದ್ದರೆ,  ಸೆಕ್ಷನ್‌ 302, ಸಾಕ್ಷಿ ನಾಶಕ್ಕಾಗಿ ಸೆಕ್ಷನ್‌ 201 ಮತ್ತು ಕಿಡ್ನಾಪ್‌ ಕೇಸ್‌ ಬುಕ್‌ ಮಾಡಲಾಗುತ್ತದೆ.

ಒಂದು ವೇಳೆ ದರ್ಶನ್‌ ಸೂಚನೆ ಮೇರೆಗೆ ಈ ಕೃತ್ಯ ನಡೆದಿದ್ದರೆ 120ಬಿ ಪ್ರಕರಣ ದಾಖಲು ಮಾಡಲಾಗುತ್ತದೆ. ಸೆಕ್ಷನ್‌ 120ಬಿ ದಾಖಲಾದಲ್ಲಿ ಸೆಕ್ಷನ್‌ 302 ಅಪರಾಧಿಗೆ ನೀಡುವ ಶಿಕ್ಷೆಯನ್ನೇ ನೀಡುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಜೀವಾವಧಿ ಅಥವ ಮರಣದಂಡನೆ ವಿಧಿಸುವ ಸಾಧ್ಯತೆ ಇರುತ್ತದೆ.

ಆದರೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿ ಇರುವುದರಿಂದ ಯಾವ ಶಿಕ್ಷೆ ನೀಡಲಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಾಗುವುದಿಲ್ಲ ಎಂದು ವಕೀಲರು

 

Tags:
error: Content is protected !!