Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಕೇಸ್:‌ ಎಸ್‌ಐಟಿ ಹೆಗಲಿಗೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಅತ್ಮಹತ್ಯೆ ಹಾಗೂ ನಿಗಮದಲ್ಲಿ ನಡೆದಿರುವ ಹಣಕಾಸಿನ ಅವ್ಯಹಾರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ದಳದ(ಎಸ್‌ಐಟಿ) ತಂಡ ರಚಿಸಿದೆ.

ಸಿಐಡಿ ಆರ್ಥಿಕ ಅಪರಾಧ ವಿಭಾಗದ ಎಡಿಜಿಪಿ ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ನಾಲ್ವರು ಐಪಿಎಸ್‌ ಅಧಿಕಾರಿಗಳೊಂದಿಗೆ ಎಸ್‌ಐಟಿ ತಂಡ ರಚನೆ ಮಾಡಲಾಗಿದೆ. ಈ ಮೂಲಕ ಎಸ್‌ಐಟಿ ವರದಿ ಆಧರಿಸಿವೇ ಸರ್ಕಾರ ಸಚಿವ ಬಿ.ನಾಗೇಂದ್ರ ವಿರುದ್ಧ ಕ್ರಮ ಕೊಗೊಳ್ಳಲಿದೆ ಎನ್ನಲಾಗಿದೆ.

ಅಷ್ಟೇ ಅಲ್ಲದೇ ನಿಗಮದಲ್ಲಿ ಅಕ್ರಮ ಹಣ ನಡೆದಿದೆ ಎನ್ನಲಾಗಿದ್ದು, ಈ ಹಣ ಅಂತಾರಾಜ್ಯಕ್ಕೆ ವರ್ಗಾವಣೆ ಆಗಿದ್ದರೆ ಎಸ್‌ಐಟಿ ತನಿಖೆ ಮಾಡಲು ಆಗಲ್ಲ. ಆಗ ಅನಿವಾರ್ಯವಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿಬೇಕಾಗುತ್ತದೆ. ಈ ಹಿನ್ನೆಲೆ ತಕ್ಷಣಕ್ಕೆ ಎಸ್‌ಐಟಿ ರಚನೆ ಮಾಡಲಾಗಿದೆ.

ಏನಿದು ಪ್ರಕರಣ?
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯ ಅಧೀಕ್ಷಕ ಚಂದ್ರಶೇಖರ್‌ ಪಿ(52) ಅವರು ಶಿವಮೊಗ್ಗದ ವಿನೋಬಾ ನಗರದ ತಮ್ಮ ನಿವಾಸದಲ್ಲಿ ಮೇ.26ರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಸಾವಿಗೆ ಕಾರಣರಾಗಿದ್ದವರ ಹೆಸರು ಮತ್ತು ನಿಗಮದ  ಹಣಕಾಸಿನ ಅವ್ಯವಹಾರದ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

Disclaimer: ಯಾವುದೇ ಸಮಸ್ಯೆಗೂ ಅತ್ಮಹತ್ಯೆ ಒಂದೇ ಪರಿಹಾರವಲ್ಲ. ನಿಮ್ಮ ತೊಂದರೆಗಳನ್ನು ಆತ್ಮೀಯರ ಜತೆ ಹಂಚಿಕೊಳ್ಳಿ. ಇಲ್ಲವಾದರೆ ಈ ಸಹಾಯವಾಣಿಗೆ ಕರೆಮಾಡಿ ಮಾತನಾಡಿ: 9152987821

 

 

Tags: